ಒಂದು ದಿನಕ್ಕೆ ಎರಡ್ಮೂರು ಮೊಟ್ಟೆ ತಿನ್ನಬಹುದು. ಅಬ್ಬಬ್ಬಾ ಅಂದರೆ ಐದಾರು ಮೊಟ್ಟೆಗಳನ್ನೂ ತಿನ್ನಬಹುದು. ಜಿಮ್ ಮಾಡಿ, ದೇಹ ಹುರಿಗೊಳಿಸುವವರು 10 ಮೊಟ್ಟೆ ತಿನ್ನಬಹುದು. ಆದರೆ ಇಲ್ಲೊಬ್ಬ ವ್ಯಕ್ತಿ ಇದ್ದಾನೆ. ಈತನ ಕೆಲಸವೇ ಜಿಮ್ ಮಾಡುವುದು, ಕಂಟಪೂರ್ತಿ ತಿನ್ನುವುದು. ಆದ್ದರಿಂದ ಈತ ಸಾಮಾನ್ಯರಂತೆ ಹತ್ತೋ, ಇಪ್ಪತ್ತೋ ಮೊಟ್ಟೆಯನ್ನು ತಿನ್ನುವುದಿಲ್ಲ, ಬದಲಿಗೆ ಪ್ರತಿದಿನ 60 ಮೊಟ್ಟೆ ತಿನ್ನುತ್ತಾನೆ. ಅಷ್ಟೆ ಅಲ್ಲ ಅವರ ಆಹಾರ ಕ್ರಮ ಕೇಳಿದ್ರೆ ಬೆಚ್ಚಿಬೀಳಬೇಕಾಗುತ್ತದೆ.
60 ಮೊಟ್ಟೆ ತಿನ್ನುವ ಆ ವ್ಯಕ್ತಿ ಬೇರೆ ಯಾರೂ ಅಲ್ಲ, `ಭಾರತದ ಶಕ್ತಿಶಾಕಿ ವ್ಯಕ್ತಿ 2016′ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಸಿದ್ಧವಾಗಿರುವ ಲೇಖರಾಜ್ ಅಲಿಯಾಸ್ ಸನ್ನಿ. ಪ್ರತಿದಿನ ಕೇವಲ 60 ಮೊಟ್ಟೆ ಮಾತ್ರವಲ್ಲ, ಸನ್ನಿ 1 ಕೆಜಿ ಚಿಕನ್, ಎರಡು ಡಜನ್ ಬಾಳೆ ಹಣ್ಣು, ಎರಡು ಗ್ಲಾಸ್ ಜ್ಯೂಸ್, ಎರಡು ಲೀಟರ್ ಹಾಲು ಕುಡಿತಾರೆ.
ಸನ್ನಿಗೆ ಹರದೀಪ್ ಸಿಂಗ್ ಎಂಬುವವರು ತರಬೇತಿ ನೀಡುತ್ತಿದ್ದಾರೆ. ಸನ್ನಿ 24 ನೇ ವಯಸ್ಸಿನಲ್ಲಿ ತರಬೇತಿ ಶುರು ಮಾಡಿದರಂತೆ. ಮೂರು ವರ್ಷಗಳ ನಂತರ ಅವರ ಪ್ರಯತ್ನಕ್ಕೆ ಫಲ ಸಿಗುತ್ತಿದೆ. ತರಬೇತುದಾರ ಹರದೀಪ್ ಕೂಡ ಶಕ್ತಿಶಾಲಿ ವ್ಯಕ್ತಿಯೇ. ಅವರು ಎರಡು ಬಾರಿ `ಮಿಸ್ಟರ್ ಇಂಡಿಯಾ’ ಆಗಿದ್ದಾರೆ. ಅವರ ಗರಡಿಯಲ್ಲಿ ಪಳಗುತ್ತಿರುವ ಸನ್ನಿ ಕೂಡಾ ಧೈತ್ಯದೇಹಿಯಾಗಿ ರೂಪುಗೊಳ್ಳುತ್ತಿದ್ದಾರೆ.
ಪಂಜಾಬಿನ ಒಂದು ಹಳ್ಳಿಯ ನಿವಾಸಿಯಾಗಿರುವ ಸನ್ನಿ, ಉದ್ಯೋಗ ಹುಡುಕುತ್ತ ಮೊಹಾಲಿಗೆ ಬಂದಿದ್ದರು. ಈಗ ಇಲ್ಲಿಯೇ ತರಬೇತಿ ಪಡೆಯುತ್ತಿದ್ದಾರೆ. ಡಬ್ಲ್ಯೂಡಬ್ಲ್ಯೂಇ ಕೂಡಾ ಉತ್ತಮ ಪವರ್ ಲಿಪ್ಟರ್ ಎಂದು ಸನ್ನಿಯನ್ನು ಆಯ್ಕೆ ಮಾಡಿದೆ. ಎರಡು ಸುತ್ತು ವಿಜೇತರಾಗಿರುವ ಸನ್ನಿ, ದೆಹಲಿಯಲ್ಲಿ ನಡೆಯುವ ಅಂತಿಮ ಸುತ್ತಿಗೆ ತಯಾರಿ ನಡೆಸುತ್ತಿದ್ದು, ಅವರ ಪ್ರಯತ್ನಕ್ಕೆ ಯಶಸ್ಸು ಸಿಗಲೆಂದು ಹಾರೈಸೋಣ.
- ರಾಜಶೇಖರ ಜೆ
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಇವರು ದಿನನಿತ್ಯ 100 ಮಂದಿಗೆ ಅನ್ನ ನೀಡುವ ಮಹಾದಾನಿ..! ಹಸಿದವರ ಹಸಿವನ್ನು ನೀಗಿಸೋ ಅನ್ನದಾತ ಅಜರ್..!
ಈ ಕನ್ನಡತಿ ಆಟೋ ಓಡಿಸುತ್ತಲೇ ಐಎಎಸ್ ಗೆ ತಯಾರಿ ನಡೆಸುತ್ತಿದ್ದಾರೆ..!
ಈತ ಬರೋಬ್ಬರಿ 800ಕ್ಕೂ ಹೆಚ್ಚು ಮಕ್ಕಳ ತಂದೆ..! ಈತನ ದಾಖಲೆ ಕಂಡು ಕೌರವರೇ ಬೆಚ್ಚಿಬಿದ್ದರು..!