ವಿಶ್ವ ಆರೋಗ್ಯಸಂಸ್ಥೆ ವಿವಿಧ ದೇಶಗಳ ಪ್ರಜೆಗಳು ದೈಹಿಕವಾಗಿ ಎಷ್ಟು ಕ್ರೀಯಾಶೀಲರಾಗಿದ್ದಾರೆ ಎಂಬುದರ ಆಧಾರದ ಮೇಲೆ ವರದಿಯೊಂದನ್ನು ಬಿಡುಗಡೆಗೊಳಿಸಿದೆ. ಇದು ಮೆಡಿಕಲ್ ಜರ್ನಲ್ ದಿ ಲನ್ಸೆಂಟ್ ನಲ್ಲಿ ಪ್ರಕಟವಾಗಿದೆ.
ಈ ವರದಿ ಪ್ರಕಾರ ಕುವೈತ್ ಅತಿ ಹೆಚ್ಚು ಸೋಮಾರಿಗಳನ್ನು ಹೊಂದಿರುವ ರಾಷ್ಟ್ರ. ಇಲ್ಲಿನ ಶೇ.67ಮಂದಿ ವ್ಯಾಯಾಮವನ್ನೇ ಮಾಡಲ್ಲವಂತೆ. 168 ರಾಷ್ಟ್ರಗಳಲ್ಲಿ ಭಾರತ 117ನೇ ಸ್ಥಾನಪಡೆದಿದೆ. ವರದಿ ಪ್ರಕಾರ ಭಾರತದಲ್ಲಿ ಶೇ34ರಷ್ಟು ಮಂದಿ ದೈಹಿಕವಾಗಿ ಸಕ್ರಿಯರಾಗಿಲ್ಲ…!
ಉಗಾಂಡ ಕಡಿಮೆ ಸೋಮಾರಿಗಳನ್ನು ಹೊಂದಿರುವ ರಾಷ್ಟ್ರವಾಗಿದೆ. ಇಲ್ಲಿನ ಶೇ 5.5 ಮಂದಿ ಮಾತ್ರ ಸೋಮಾರಿಗಳು.