ತೈಲ ಬೆಲೆ ಏರಿಕೆ ಖಂಡಿಸಿ ನಡೆದಿರುವ ಭಾರತ್ ಬಂದ್ ಬಿಸಿ ಕುಡುಕರಿಗೂ ತಟ್ಟಿದೆ…! ಬಂದ್ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಊಟ ಸಿಗದ ಕುಡುಕರು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರನ್ನು ನೆನೆದಿದ್ದಾರೆ…!
ಉಡುಪಿಯಲ್ಲಿ ಹೋಟೆಲ್ ಗಳೆಲ್ಲಾ ಬಂದ್ ಆಗಿದ್ದು, ಸಿಟಿ ಬಸ್ ನಿಲ್ದಾಣದ ಬಳಿ ಐದಾರು ಕುಡುಕರು ಊಟ ಸಿಗದೆ ಹೊಟ್ಟೆ ಹಸಿವಿನಿಂದ ಗೋಳಾಡುತ್ತಿದ್ದು, ಬಂಗಾರಪ್ಪ ಅವರನ್ನ ನೆನೆಪು ಮಾಡಿಕೊಂಡಿದ್ದಾರೆ.
ಹೋಟೆಲ್, ಅಂಗಡಿ ತೆರೆದು ಊಟ ಕೊಡುವಂತೆ ಅಂಗಲಾಚಿರುವ ಕುಡುಕರು ರಂಪಾಟ ಮಾಡಿದರು.
ದಿವಂಗತ ಬಂಗಾರಪ್ಪ ಅವರನ್ನು ನೆನಪು ಮಾಡಿಕೊಂಡ ಅವರು, ನಮ್ಮ ಬಂಗಾರಪ್ಪನವರ ಕಾಲದಲ್ಲಿ ಹೀಗಿರಲಿಲ್ಲ. ಎಲ್ಲವೂ ಚೆನ್ನಾಗಿತ್ತು ಅಂತ ಸ್ಮರಿಸಿದರು…!