ಮೆಜೆಸ್ಟಿಕ್ ಇಂದು ಬಸ್ ನಿಲ್ದಾಣವಲ್ಲ, ಕ್ರಿಕೆಟ್ ಗ್ರೌಂಡ್..!
ಏನಪ್ಪಾ? ಇದು ಮೆಜೆಸ್ಟಿಕ್ ಕ್ರಿಕೆಟ್ ಅಂಗಣವಾಯ್ತಾ? ಇಲ್ಲಿ ಯಾವ ಪಂದ್ಯ ನಡೀತಿದೆ? ಎಂದು ಮೂಗಿನ ಮೇಲೆ ಬೆರಳಿಟ್ಟು ಕೊಂಡ್ರಾ? ಹೌದು ಇಂದು ಮೆಜೆಸ್ಟಿಕ್ ಕ್ರಿಕೆಟ್ ಫೀಲ್ಡ್ ಆಗಿತ್ತು..!
ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ದೇಶ ವ್ಯಾಪಿ ಕರೆ ನೀಡಿರುವ ಭಾರತ್ ಬಂದ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ನಾನಾ ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿವೆ.
ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಬೆಂಗಳೂರಿನ ಮೆಜಸ್ಟಿಕ್ ನಲ್ಲಿ ಕ್ರಿಕೆಟ್ ಆಡುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.ಹಾಗಾಗಿ ಮೆಜೆಸ್ಟಿಕ್ ಕ್ರಿಕೆಟ್ ಗ್ರೌಂಡ್ ಆಗಿತ್ತು.