ತೈಲ ಬೆಲೆ ಏರಿಕೆ ಖಂಡಿಸಿ ನಡೆಯುತ್ತಿರುವ ‘ಭಾರತ್ ಬಂದ್ ‘ ಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ತಟ್ಟಿಲ್ಲ…! ಬಂದ್ ಗೂ ಬೆಲೆ ಏರಿಕೆಗೂ ಸಂಬಂಧ ಇಲ್ಲ ಎನ್ನುವಂತೆ ಬೆಲೆ ಏರಿಕೆ ಆಗುತ್ತಲೇ ಇದೆ…!
ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 23 ಪೈಸೆ, ಡೀಸೆಲ್ ಬೆಲೆ 22 ಪೈಸೆಯಷ್ಟು ಏರಿಕೆ ಕಂಡಿದೆ. ಪೆಟ್ರೋಲ್ 80.73 ರೂ, ಡೀಸೆಲ್ 72.83 ರೂಗೆ ಮುಟ್ಟಿದೆ…!
ಮುಂಬೈ ನಲ್ಲಿ ಪೆಟ್ರೋಲ್ ಬೆಲೆ 88.12 ರೂ, ಡೀಸೆಲ್ ಬೆಲೆ 77.32 ರೂ ಆಗಿದೆ.
ಬೆಂಗಳೂರಲ್ಲಿ ಭಾನುವಾರ 83.12 ರೂ, ಡೀಸೆಲ್ ಬೆಲೆ 74. 95 ರೂ ಇತ್ತು. ಇಂದು ಕ್ರಮವಾಗಿ 83.46 ರೂ ಮತ್ತು 75.26 ರೂಗಳಿಗೆ ಏರಿಕೆ ಆಗಿದೆ.