ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ನಾನ್ ಹೋಮ್ ಬ್ರಾಂಚ್ ನಲ್ಲಿ ಹಣ ಠೇವಣಿ ಮಾಡಲು ಇದ್ದ ಗರಿಷ್ಠ ಮಿತಿಯನ್ನು ರದ್ದುಪಡಿಸಿದೆ.
ಗ್ರಾಹಕ ತನ್ನ ಖಾತೆಯನ್ನು ಹೊಂದಿರುವ ಶಾಖೆ ಹೋಂ ಬ್ರಾಂಚ್ ಆಗುತ್ತದೆ. ಉಳಿದೆಲ್ಲಾ ಬ್ರಾಂಚ್ ಗಳು ನಾನ್ ಹೋಮ್ ಬ್ರಾಂಚ್ ಆಗುತ್ತದೆ.
ಈ ಹಿಂದೆ ನಾನ್ ಹೋಮ್ ಬ್ರಾಂಚ್ ನಲ್ಲಿ ಹಣ ಠೇವಣಿ ಗರಿಷ್ಠ ಮಿತಿ 25,000 ರೂ ಇತ್ತು.
ಎಸ್ ಎಂ ಇ ವಿಭಾಗದ ಖಾತೆಗಳಿಗೆ ನಾನ್ ಹೋಮ್ ಬ್ರಾಂಚ್ ನಲ್ಲಿ ಪ್ರತಿದಿನಕ್ಕೆ ನಗದು ಠೇವಣಿ ಮಿತಿ 2ಲಕ್ಷ ರೂ ಮುಂದುವರೆಯಲಿದೆ ಎಂದು ಎಸ್ ಬಿಐ ಟ್ವೀಟರ್ ನಲ್ಲಿ ತಿಳಿಸಿದೆ.
ನಾನ್ ಹೋಮ್ ಬ್ರಾಂಚ್ ಗಳಲ್ಲಿ ನಗದು ಠೇವಣಿಯ ಪ್ರತಿ ವಹಿವಾಟಿಗೆ ಎಸ್ ಬಿಐ 50 ರೂ ಸುಂಕ (ಪ್ಲಸ್ ಜಿಎಸ್ ಟಿ) ವಿಧಿಸುತ್ತದೆ.