ರಿಲಾಯನ್ಸ್ ಜಿಯೋಗೆ ಏರ್ ಟೆಲ್ ಪೈಪೋಟಿ ನೀಡಲು ಮುಂದಾಗಿ ಭರ್ಜರಿ ಆಫರ್ ಘೋಷಿಸಿದೆ.
ಜಿಯೋ ಹಬ್ಬಗಳ ಪ್ರಯುಕ್ತ ಆಫರ್ ಘೋಷಿಸಿತ್ತು. 349 ರೂ ರೀಚಾರ್ಜ್ ಗೆ ಪ್ರತಿದಿನ 1.5 ಜಿಬಿ ಡಾಟಾವನ್ನು 70 ದಿನಗಳಿಗೆ ನೀಡಿತ್ತು.
ಈಗ ಜಿಯೋಗೆ ಪೈಪೋಟಿ ನೀಡುವಂತೆ ಏರ್ ಟೆಲ್ ಹೊಸ ಪ್ಲಾನ್ ನೀಡಿದೆ.
ಈ ಪ್ರಕಾರ 419 ರೂ ರೀಚಾರ್ಜ್ ಮಾಡಿದರೆ , ಪ್ರತಿದಿನ 1.4 ಜಿಬಿ ಡಾಟಾ ಹಾಗೂ 75 ದಿನಗಳ ವ್ಯಾಲಿ ಡಿಟಿ ನೀಡಲಿದೆ. ಈ ಪ್ಲಾನ್ ನಲ್ಲಿ ನಿತ್ಯ 300 ನಿಮಿಷಗಳ ಫ್ರೀ ಲೋಕಲ್ ಹಾಗೂ ಎಸ್ ಟಿಡಿ ಕಾಲ್ ಹಾಗೂ ವಾರಕ್ಕೆ 1000 ನಿಮಿಷಗಳ ಫ್ರೀ ಲೋಕಲ್ ಮತ್ತು ಎಸ್ ಟಿಡಿ ಕಾಲ್ ಸೌಲಭ್ಯ ಸಿಗುತ್ತದೆ. ಫ್ರೀ ನ್ಯಾಷನಲ್ ರೋಮಿಂಗ್ ಮತ್ತು 100 ಎಸ್ ಎಂಎಸ್ ಸಹ ಸಿಗಲಿದೆ ಎಂದು ಏರ್ ಟೆಲ್ ಘೋಷಿಸಿದೆ.