ಒಂದು ಲಾಡಿಗೆ ಹೆಚ್ಚೆಂದರೆ 20 ರೂ ಇರಬಹುದೇ? ಇಲ್ಲ, 30, ಬೇಡ 100 ರೂ ಇರಬಹುದೇ? ಎಲ್ಲಾದರೂ ಲಕ್ಷ ರೂ ಇರುತ್ತದೆಯೇ? ಸಾಧ್ಯವೇ ಇಲ್ಲ!
ಆದರೆ, ಬೆಂಗಳೂರಿನ ನಾಗವರದಲ್ಲಿ ಕೇವಲ ಒಂದು ಲಾಡನ್ನು ಉದ್ಯಮಿಯೊಬ್ಬರು 3,65,000 ರೂ ನೀಡಿ ತನ್ನದಾಗಿಸಿಕೊಂಡಿದ್ದಾರೆ.
ನವೋದಯ ಗೆಳೆಯರ ಬಳಗ ಗಣೇಶ ಸಮಿತಿಯ 29ನೇ ವರ್ಷದ ಗಣೇಶ ಮಹೋತ್ಸವದಲ್ಲಿ 7ಕೆಜಿ ಲಾಡು ಮಾಡಿದ್ದರು. ಈ ಲಾಡನ್ನು ಹರಾಜಿಗೆ ಹಾಕಲಾಯಿತು. 50, 000 ರೂ ನಿಂದ ಈ ಹರಾಜು ಪ್ರಕ್ರಿಯೆ ಆರಂಭವಾಯಿತು. ಉದ್ಯಮಿ ಮುತ್ಯಾಲ ರಮಣ ರೆಡ್ಡಿ ಎಂಬುವವರು 3.65 ಲಕ್ಷ ರೂಗೆ ಲಾಡು ಖರೀದಿ ಮಾಡಿದರು.
ಕಳೆದ ಮೂರು ವರ್ಷದಿಂದ ಲಾಡು ಹರಾಜು ಪ್ರಕ್ರಿಯೆ ನಡೆದುಕೊಂಡು ಬಂದಿದೆ. ಮೊದಲ ವರ್ಷ 40 ಸಾವಿರ ರೂ ಗಳಿಗೆ ಹರಾಜಾಗಿತ್ತು. ಕಳೆದ ವರ್ಷ 78 ಸಾವಿರ ರೂಗಳಿಗೆ ಹರಾಜಾಗಿತ್ತು. ಈ ಬಾರಿ ದಾಖಲೆ ಬೆಲೆಗೆ ಮುತ್ಯಾಲ ರಮಣರೆಡ್ಡಿ ಖರೀದಿಸಿದ್ದಾರೆ.