ಡ್ರಾಕುಲ್ಲಾಗಳ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿದೆ. ರಕ್ತವನ್ನು ಹೀರುವ ಮತ್ತು ಬಿಸಿಲೆಂದರೆ ಬೆದರಿ ಓಡುವುದು ಡ್ರಾಕುಲ್ಲಾಗಳ ಗುಣ. ಅವುಗಳ ಕುರಿತಾದ ಕತೆಯನ್ನು ಹೆಚ್ಚಿನ ಜನರು ಸಿನೆಮಾದಲ್ಲಿ ನೋಡಿರುತ್ತಾರೆ. ಆದರೆ, ನಿಜ ಜೀವನದಲ್ಲೂ ಒಂದು ಡ್ರ್ಯಾಕುಲ್ಲಾ ಇದೆ. ಅದು ಹೆಣ್ಣು ಡ್ರಾಕುಲ್ಲಾ..! ಆಕೆ ನೋಡಲು ಡ್ರಾಕುಲ್ಲಾ ರೀತಿಯೇ ಇದ್ದಾಳೆ. ರೂಪದಲ್ಲಿ ಅಲ್ಲದಿದ್ದರೂ ಕೂಡಾ ಗುಣದಲ್ಲಿ ಮಾತ್ರ ಡ್ರಾಕುಲ್ಲಾವನ್ನೇ ಬೆದರಿಸುವಂತಿದ್ದಾಳೆ. ಆಕೆಗೆ ಗೆಳೆಯನ ರಕ್ತ ಎಂದರೆ ಬಲು ಇಷ್ಟವಂತೆ..!
ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ನ 38 ವರ್ಷದ ಜಾರ್ಜಿಯಾ ಕಾಂಡೋನ್ ಎಂಬ ಮಹಿಳೆ ಈಗ ಜಗತ್ತಿನ ಗಮನವನ್ನು ತನ್ನೆಡೆಗೆ ಸೆಳೆಯುತ್ತಿದ್ದಾಳೆ. ಈಕೆ ಸ್ವಯಂ ಘೋಷಿತ ದೆವ್ವವಂತೆ..! ಈಕೆ ತನ್ನ ಸ್ನೇಹಿತನ ರಕ್ತವನ್ನು ಕುಡಿಯುತ್ತಾಳಂತೆ. ರಕ್ತವೆಂದರೆ ಈಕೆಗೆ ಬಲು ಇಷ್ಟ. ವಾರಕ್ಕೆ ಒಂದು ಸಲ ಮನುಷ್ಯನ ರಕ್ತವನ್ನು ಕುಡಿಯದೇ ಇದ್ದರೆ ಹುಚ್ಚಿಯಂತಾಗುತ್ತಾಳಂತೆ..! ಗಾಯಗಳಾದಾಗ ಅಲ್ಲೇ ಬಿಸಿ ರಕ್ತ ಕುಡಿಯುವುದೆಂದರೆ ನನಗಿಷ್ಟ ಎಂದು ಈಕೆಯೇ ಹೇಳಿದ್ದಾಳೆ. ವಿಶೇಷವೆಂದರೆ ಈಕೆಗೆ ಬರೀ ರಕ್ತ ಇಷ್ಟವಾದರೆ ಬಿಸಿಲು ಕಂಡರಾಗದು. ಯುವಿ ಕಿರಣಗಳನ್ನು ಈಕೆಯಿಂದ ಸಹಿಸಲಾಗುವುದಿಲ್ಲ.
ಚಿಕ್ಕ ವಯಸ್ಸಿನಲ್ಲೇ ಈಕೆ ಮನುಷ್ಯನ ರಕ್ತವನ್ನು ಕುಡಿಯಲು ಆರಂಭಿಸಿದ್ದಂತೆ. ಈಕೆಗೆ 12 ವರ್ಷ ಇದ್ದಾಗ ತನಗೆ ಗಾಯವಾದಾಗ ತನ್ನದೇ ರಕ್ತ ಕುಡಿಯಲು ಆರಂಭಿಸಿದಳು. ಅದೇ ನಂತರದ ದಿನಗಳಲ್ಲಿ ಅಭ್ಯಾಸವಾಗಿ ಹೋಯಿತು. ತನಗೆ ಕುಡಿಯಲು ರಕ್ತ ನೀಡುವಂತೆ ಕೆಲವು ಜನರತ್ತ ಈಕೆ ಕೇಳಿಕೊಂಡಿದ್ದಾಳೆ. ಆದರೆ ಯಾರೂ ಒಪ್ಪಿರಲಿಲ್ಲ. ಕಳೆದ ಎರಡು ವರ್ಷದಿಂದ ಈಕೆ ಜಾಮೇಲ್ ಎಂಬಾತನೊಂದಿಗೆ ಇದ್ದಾಳೆ. ಈತ ಕೂಡಾ ಈಕೆಗೆ ಹಲವು ಬಾರಿ ರಕ್ತ ಕೊಟ್ಟು ಈಕೆಯ ರಕ್ತದ ದಾಹವನ್ನು ನೀಗಿಸಿದ್ದ..!
ವೃತ್ತಿಯಲ್ಲಿ ಈಕೆ ಮೇಕಪ್ ಆರ್ಟಿಸ್ಟ್ ಆಗಿರುವ ಈಕೆಯ ರಕ್ತದಾಹವನ್ನು ಕಂಡು ಎಷ್ಟು ಜನ ಈಕೆಯ ಬಳಿ ಬರುತ್ತಾರೋ ಗೊತ್ತಿಲ್ಲ..!