ಬಿಬಿಎಂಪಿ ಅಧಿಕಾರಿಗಳು ರಾತ್ರೋ ರಾತ್ರಿ ಬೀದಿಗಿಳಿದಿದ್ದಾರೆ! ಇದು ಹೈಕೋರ್ಟ್ ಚಾಟಿ ಬೀಸಿರುವ ಫಲ!
ಮೊದಲೇ ಎಚ್ಚೆತ್ತುಕೊಂಡು ಕೆಲಸ ಮಾಡಿದ್ದರೆ ಈ ತಲೆನೋವು ಅಧಿಕಾರಿಗಳಿಗೆ ಇರ್ತಿರ್ಲಿಲ್ಲ.
ರಸ್ತೆಗುಂಡಿಗಳನ್ನು ಮುಚ್ಚುವಂತೆ ಹೈಕೋರ್ಟ್ ಕಿವಿಹಿಂಡಿದ್ದು, ಇಂದು (ಸೆ.20) ಸಂಜೆಯೊಳಗೆ ಈ ಕೆಲಸ ಆಗದೇ ಇದ್ದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದರಿಂದ ಬಿಬಿಎಂಪಿಗೆ ಚಳಿಜ್ವರ ಬಿಟ್ಟಿದೆ! ಇದರಿಂದಾಗಿ ನಗರದ ಕೆ.ಆರ್ ಸರ್ಕಲ್, ಚಾಲುಕ್ಯ ಸಿಗ್ನಲ್ ಮತ್ತಿತರ ಕಡೆಗಳಲ್ಲಿ ಗುಂಡಿ ಮುಚ್ಚುವ ಕೆಲಸಕ್ಕೆ ಮುಂದಾಗಿದೆ.