ಒಂದು ಕಾಲದಲ್ಲಿ ಕನ್ನಡ, ತಮಿಳು, ಹಿಂದಿ ಸೇರಿದಂತೆ ಅನೇಕ ಭಾಷೆಗಳ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ಮೈಸೂರಿನ ಪ್ರೀಮಿಯರ್ ಸ್ಟೂಡಿಯೋ ಇದೀಗ ನೆಲಸಮವಾಗಿ ಇತಿಹಾಸದ ಪುಟ ಸೇರಿದೆ.
ಈ ಸ್ಟೂಡಿಯೋ ದಕ್ಷಿಣ ಭಾರತದಲ್ಲೇ ಸಿನಿಮಾ ಚಿತ್ರೀಕರಣಕ್ಕೆ ಹೆಸರಾಗಿತ್ತು. ಡಾ. ರಾಜ್ ಕುಮಾರ್, ಡಾ. ವಿಷ್ಣುವರ್ಧನ್, ಅಂಬರೀಶ್, ಅಮಿತಾ ಬಚ್ಚನ್ ಸೇರಿದಂತೆ ಹೆಸರಾಂತ ಸ್ಟಾರ್ ನಟರ ಚಿತ್ರಗಳು ಈ ಸ್ಟೂಡಿಯೋದಲ್ಲಿ ಚಿತ್ರೀಕರಣಗೊಂಡಿದ್ದವು. 1000 ಸಾವಿರಕ್ಕೂ ಹೆಚ್ಚಿನ ಸಿನಿಮಾಗಳ ಚಿತ್ರೀಕರಣ ಇಲ್ಲಿ ನಡೆದಿದೆ. ಪ್ರೀಮಿಯರ್ ಸ್ಟೂಡಿಯೋ ಇರುವ ಕಟ್ಟಡವನ್ನು ಚಿತ್ರರಂಜನ್ ಮಹಲ್ ಎಂದು ಕರೆಯಲಾಗುತ್ತಿತ್ತು.
ಈ ಕಟ್ಟಡ ಮೈಸೂರು ರಾಜಕುಮಾರಿ ಲೀಲಾವತಿ ಅವರಿಗೆ ಸೇರಿದ್ದು, 1954ರಲ್ಲಿ ಎಂ.ಎನ್. ಬಸವರಾಜಯ್ಯ ಅವರು ಖರೀದಿಸಿ ಸ್ಟುಡಿಯೋ ಆರಂಭಿಸಿದ್ದರು.