ಕಿಡ್ನಾಪ್ ಮತ್ತು ಹಲ್ಲೆ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಅರೆಸ್ಟ್ ಆಗಿದ್ದಾರೆ.
ವಸಂತನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿದ್ದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿದ್ದ ಮಾರುತಿ ಗೌಡ ಎಂಬುವವರ ಮೇಲೆ ಹಲ್ಲೆ ನಡೆಸಿ ,ಕಿಡ್ನಾಪ್ ಮಾಡಿದ್ದಾರೆ.
ಜಿಮ್ ಟ್ರೈನರ್ ಪಾನಿಪೂರಿ ಕಿಟ್ಟಿ ಅಣ್ಣನ ಮಗ ಮಾರುತಿ. ಇವರ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಸ್ನೇಹಿತ ಶಿರೀಷ್ ಎಂಬುವವರು ಸಂಬಂಧಿಕರಿಗೆ ತಿಳಿಸಿದ್ದಾರೆ. ಬಳಿಕ ಪಾನಿ ಪೂರಿ ಕಿಟ್ಟಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪಾನಿಪೂರಿ ಕಿಟ್ಟಿ ಹಾಗೂ ದುನಿಯಾ ವಿಜಯ್ ಸಹಚರ ಪ್ರಸಾದ್ ನಡುವಿನ ಮನಸ್ತಾಪವೇ ಇದಕ್ಕೆ ಕಾರಣ ಎನ್ನಲಾಗಿದೆ. ಮಾರುತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಹೇಳಿಕೆ ಮುಖ್ಯವಾಗಲಿದೆ. ಕೇಸ್ ನಲ್ಲಿ ಪ್ರಸಾದ್ 1ನೇ ಆರೋಪಿಯಾಗಿದ್ದು, ವಿಜಯ್ ನಂ 2 ಆಗಿದ್ದಾರೆ. ಕೋರ್ಟ್ ರಜೆ ಇರವುದರಿಂದ ಆರೋಪಿಗಳನ್ನು ನ್ಯಾಯಾದೀಶರ ಮನೆಯಲ್ಲಿ ಅವರ ಮುಂದೆ ಹಾಜರುಪಡಿಸಲಾಗುತ್ತದೆ.