ಹೇ, ಸುಮ್ನೆ ಬೌಲಿಂಗ್ ಮಾಡ್ತೀಯ? ಇಲ್ಲ, ಬೇರೆಯವರಿಗೆ ಬೌಲಿಂಗ್ ಕೊಡ್ಲಾ? ಹೀಗಂತ ಮಹೇಂದ್ರ ಸಿಂಗ್ ಧೋನಿ ಕುಲ್ದೀಪ್ ಯಾದವ್ ಮೇಲೆ ಗರಂ ಆಗಿರೋ ವೀಡಿಯೋ ತುಣುಕು ವೈರಲ್ ಆಗ್ತಿದೆ.
ಯುಎಇ ನಲ್ಲಿ ನಡೆಯುತ್ತಿರೋ ಏಷ್ಯಾಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದ ವೇಳೆ ನಡೆದ ಮಾತುಕತೆಯ ವೀಡಿಯೋ ಇದು.
ರೋಹಿತ್ ಶರ್ಮಾ ವಿಶ್ರಾಂತಿ ಬಯಸಿದ ಹಿನ್ನೆಲೆಯಲ್ಲಿ ಮಾಜಿ ನಾಯಕ ಧೋನಿ ಮತ್ತೆ ನಾಯಕನಾಗಿ ಕಣಕ್ಕಿಳಿದಿದ್ದರು.
ಕ್ಯಾಪ್ಟನ್ ಮಾಹಿ ಬೌಲರ್ ಕುಲ್ದೀಪ್ ಗಾಗಿ ಫೀಲ್ಡಿಂಗ್ ಸೆಟ್ ಮಾಡಿ ಬೌಲಿಂಗ್ ಮಾಡುವಂತೆ ಸೂಚಿಸಿದ್ರು. ಬೌಲಿಂಗ್ ಮಾಡಲು ಧೋನಿ ಸೂಚಿಸಿದಾಗ ಕುಲ್ದೀಪ್ ಫೀಲ್ಡಿಂಗ್ ಚೇಂಜ್ ಮಾಡಲು ಧೋನಿಗೆ ಹೇಳಿದ್ದಾರೆ. ಈ ವೇಳೆ ಧೋನಿ ಕುಲ್ದೀಪ್ ಗೆ ಬೌಲಿಂಗ್ ಮಾಡ್ತೀಯ? ಇಲ್ಲ ಬೌಲರ್ ಚೇಂಜ್ ಮಾಡ್ಲಾ ? ಎಂದಿದ್ದಾರೆ. ಕುಲ್ದೀಪ್ ಮರುಮಾತಾಡದೆ ಬೌಲಿಂಗ್ ಮಾಡಿದ್ದಾರೆ.
ಧೋನಿ ಕುಲ್ದೀಪ್ ವಿರುದ್ಧ ಗರಂ ಆಗ್ತಿರೋದು ಇದೇ ಮೊದಲೇನು ಅಲ್ಲ. ಇದು ಎರಡನೇ ಬಾರಿ.
2017ರ ಡಿಸೆಂಬರ್‌ರಲ್ಲಿ ಇಂಧೋರ್‌ನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಲಂಕಾ ಲೀಲಾಜಾಲವಾಗಿ ರನ್ ಗಳಿಸುತ್ತಿತ್ತು. ಕುಲ್ದೀಪ್ ಯಾದವ್ ಬೌಲಿಂಗ್ ಮಾಡಲು ಬಂದಾಗ, ಧೋನಿ ಕವರ್ ಫೀಲ್ಡರ್ ತೆಗೆದು ಪಾಯಿಂಟ್‌ನಲ್ಲಿ ಫೀಲ್ಡರ್ ಹಾಕುವಂತೆ ಸೂಚಿಸಿದ್ದಾರೆ. ಆದರೆ , ಕುಲ್ದೀಪ್ ಪರವಾಗಿಲ್ಲ ಸದ್ಯ ಇರೋ ಹಾಗೇ ಇರಲಿ ಅಂತ ಹೇಳಿದ್ದಾರೆ. ಆ ವೇಳೆ ಧೋನಿ ನಾನು 300 ಪಂದ್ಯ ಸುಮ್ನೆ ಆಡಿದ್ದೀನ? ನಂಗೆ ತಲೆಕೆಟ್ಟಿದ್ಯಾ? ಅಂತ ಸಿಟ್ಟಾಗಿದ್ದರು.
Dhoni Thug Life ??#INDvAFG pic.twitter.com/8rV0bmMyKv
— khanak (@khanak_08) September 25, 2018