ಕೇಂದ್ರ ಸರ್ಕಾರ ವಿತ್ತೀಯ ಕೊರತೆ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದ ಪರಿಣಾಮ ತಡೆಯುವ ಉದ್ದೇಶದಿಂದ 19 ವಸ್ತುಗಳ ಬೆಲೆ ಹೆಚ್ಚಿಸಿದೆ. ಹವಾನಿಯಂತ್ರಿಕಗಳು , ಫ್ರಿಜ್ ಸೇರಿದಂತೆ 19ವಸ್ತುಗಳ ಮೂಲ ಆಮದು ಸುಂಕ ಶೇ. 5 ರಿಂದ 10 ರ ವರೆಗೆ ಹೆಚ್ಚಿದ್ದು. ಸೆ.26 ರ ರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದೆ. ಇದರಿಂದಾಗಿ ವಿದೇಶದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದೆ.
ಹವಾನಿಯಂತ್ರಕ, ಫ್ರಿಜ್, ವಾಷಿಂಗ್ ಮಶಿನ್, ಕಂಪ್ರೆಸ್ಸರ್, ಸ್ಪೀಕರ್, ಪಾದರಕ್ಷೆ, ಕಾರ್ ಟೈರು, ಪಾಲಿಶ್ಡ್ ವಜ್ರ, ಅರೆ ಸಂಸ್ಕರಿತ ವಜ್ರ, ಲ್ಯಾಬ್ ವಜ್ರ, ಬಣ್ಣದ ಮುತ್ತು-ರತ್ನಗಳು, ಚಿನ್ನಾಭರಣಗಳು, ಸ್ಯಾನಿಟರಿ ಸಲಕರಣೆಗಳು, ಬಳೆ, ಸೂಟ್‌ಕೇಸು, ಟ್ರಾವೆಲ್ ಬ್ಯಾಗ್, ಪ್ಯಾಕಿಂಗ್ ಸಲಕರಣೆ, ಟೇಬಲ್‌ವೇರ್, ಬಾತ್‌ವೇರ್, ಅಡುಗೆ ಮನೆ ಸಲಕರಣೆಗಳು, ವೈಮಾನಿಕ ಇಂಧನ ಇವೇ ಮೊದಲಾದವು ಬೆಲೆ ಹೆಚ್ಚಳಕ್ಕೆ ಒಳಗಾದ ವಸ್ತುಗಳಾಗಿವೆ.