ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಅತೀ ದೊಡ್ಡ ಪ್ರಶಸ್ತಿ ಚಾಂಪಿಯನ್ಸ್ ಆಫ್ ಅರ್ತ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರಾನ್ ಅವನೊಡನೆ ಈ ಪ್ರಶಸ್ತಿ ಹಂಚಿಕೊಳ್ಳುವರು.
ಮೋದಿ ಪಾಲಿಸಿ ಆಫ್ ಲೀಡರ್ ಶಿಪ್ ವಿಭಾಗದಲ್ಲಿ ಪ್ರಶಸ್ತಿ ಪಡೆದಿದ್ದಾರೆ.
ಮೋದಿ ಅವರು ಈ ಪ್ರಶಸ್ತಿಗೆ ಮಾತ್ರರಾಗಲು ಕಾರಣ ಸೌರಶಕ್ತಿ ಬಳಕೆಗೆ ಉತ್ತೇಜನ ನೀಡುವ ಅಂತರಾಷ್ಟ್ರೀಯ ಸೌರ ಮೈತ್ರಿಕೂಟ ಸ್ಥಾಪನೆಯಲ್ಲಿ ಮಹತ್ವದ ಪಾತ್ರವಹಿಸಿದ್ದು.
ಅತೀ ಹೆಚ್ಚು ಸೂರ್ಯನ ಬೆಳಕನ್ನು ಪಡೆಯುವ ದೇಶಗಳ ಒಕ್ಕೂಟವನ್ನು ಸ್ಥಾಪಿಸಿ, ಸೌರ ವಿದ್ಯುತ್ ಬಳಕೆಯ ತಂತ್ರಜ್ಞಾನ, ಸಂಪನ್ಮೂಲಗಳನ್ನು ಹಂಚಿಕೊಳ್ಳುವ ಬಗ್ಗೆ 2015ರಲ್ಲಿ ಮೊದಲ ಬಾರಿಗೆ ಇಂಗ್ಲೆಂಡಿನ ಲಂಡನ್ ನಲ್ಲಿರುವ ವೆಂಬ್ಲೆ ಸ್ಟೇಡಿಯಂನಲ್ಲಿ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದರು.
ಈ ದೇಶಗಳನ್ನು ಸೂರ್ಯನ ಮಕ್ಕಳು ಎಂದು ಮೋದಿ ಉಲ್ಲೇಖಿಸಿದ್ದರು. 2016ರಲ್ಲಿ ಈ ಬಗ್ಗೆ ರೂಪುರೇಷೆ ಸಿದ್ಧವಾಗಿದ್ದು, ಈ ಒಪ್ಪಂದಕ್ಕೆ ಒಳಪಡಲು ಅಂದಿನಿಂದ 121 ದೇಶಗಳು ಸಹಿ ಹಾಕಿವೆ. 2018ರ ಮಾರ್ಚ್ ನಲ್ಲಿ ನವದೆಹಲಿಯಲ್ಲಿ ಮೊದಲ ಸಮ್ಮೇಳನ ಆಯೋಜನೆಗೊಂಡಿತ್ತು. ಇದೇ ಸೌರ ಒಕ್ಕೂಟ.