ಆನ್ ಲೈನ್ ಮೂಲಕ ಔಷಧಗಳ ಖರೀದಿ ಮತ್ತು ಮಾರಾಟಕ್ಕೆ ಅವಕಾಶ ನೀಡುವುದನ್ನು ವಿರೋಧಿಸಿ ಆಲ್ ಇಂಡಿಯಾ ಆರ್ಗನೈಸೇಷನ್ ಆಫ್ ಕೆಮಿಸ್ಟ್ರಿ ಅಂಡ್ ಡ್ರಗ್ಗಿಸ್ಟ್ ಬಂದ್ ಗೆ ಕರೆ ನೀಡಿದ್ದು, ಇಂದು ದೇಶದಾದ್ಯಂತ ಔಷಧ ಮಳಿಗೆಗಳು ಬಂದ್ ಆಗಲಿವೆ.
ಬಂದ್ ಗೆ ಅನೇಕ ಸಂಘಟನೆಗಳು ಬೆಂಬಲ ಸೂಚಿಸಿದ್ದು, ರಾಜ್ಯದ ಬಹುತೇಕ ಮೆಡಿಕಲ್ ಶಾಪ್ ಗಳು ಮುಚ್ಚಲಿವೆ.
ಈ ಹಿನ್ನೆಲೆಯಲ್ಲಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳ ದಾಸ್ತಾನು ಮಾಡಿಕೊಳ್ಳುವಂತೆ ಆರೋಗ್ಯ ಇಲಾಖೆ ನಿರ್ದೇಶಕರು ಆದೇಶಿಸಿದ್ದಾರೆ.
ಬೆಂಗಳೂರಲ್ಲಿ 6500 ಸೇರಿದಂತೆ ರಾಜ್ಯದಲ್ಲಿ 24 ಸಾವಿರ, ದೇಶದಾದ್ಯಂತ 6.5 ಲಕ್ಷ ಔಷಧ ಮಳಿಗೆಗಳು ಇಂದು ತೆರೆಯುವುದಿಲ್ಲ.