ಧಾರ್ಮಿಕ ಕಾರಣ ಹಾಗೂ ಇತ್ತೀಚಿನ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಅಕ್ಟೋಬರ್ 15 ರವರೆಗೆ ಶಬರಿಮಲೆ ದೇವಸ್ಥಾನವನ್ನು ಬಂದ್ ಮಾಡಲಾಗಿದೆ. ಇದರಿಂದ ಯಾರಿಗೂ ಅಯ್ಯಪ್ಪನ ದರ್ಶನದ ಭಾಗ್ಯ ಇಲ್ಲದಂತಾಗಿದೆ.
ಸುಪ್ರೀಂಕೋರ್ಟ್ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿದ್ದು, ಅ.16 ರಂದು ದೇವಾಲಯದ ಬಾಗಿಲು ತೆರೆದಾಗ ಮಹಿಳೆಯರು ಹೋಗುತ್ತಾರೋ ಎಂಬುದನ್ನು ನೋಡಬೇಕು.
ಅ.16ರೊಳಗೆ ತೀರ್ಪಿನ ಮರು ಪರಿಶೀಲನೆ ಮಾಡಬೇಕು ಎಂದು ಧಾರ್ಮಿಕ ಸಂಘಟನೆಗಳು ಮೇಲ್ಮನವಿ ಸಲ್ಲಿಸಿದರೂ ಅಚ್ಚರಿ ಇಲ್ಲ.