ನನ್ನ ಪ್ರೀತ್ಸೆ, ನನ್ನೇ ಪ್ರೀತ್ಸೆ ಅಂತ ಯುವತಿಯ ಹಿಂದೆ ಬಿದ್ದ ಯುವಕ ಅನುಮಾನಾಸ್ಪದ ಸಾವನ್ನಪ್ಪಿದ ಘಟನೆ ಕೋಲಾರದ ಶ್ರೀನಿವಾಸಪುರ ತಾಲೂಕಿನ ಮೊಗಲಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಮೊಗಲಹಳ್ಳಿ ಗ್ರಾಮದ 20 ವರ್ಷದ ಶ್ರೀನಿವಾಸ್ ಮೃತ.
ಈತ ಇದೇ ಗ್ರಾಮದ ಯುವತಿ ಹಿಂದೆ ಬಿದ್ದಿದ್ದ. ಲವ್ ಮಾಡೇ ಲವ್ ಮಾಡೇ ಅಂತ ಪೀಡಿಸ್ತಿದ್ದ ಎನ್ನಲಾಗಿದೆ. ಅವಳು ಪ್ರೀತಿಯನ್ನು ಒಪ್ಪಿಕೊಳ್ಳದಿದ್ದರೂ ಶ್ರೀನಿವಾಸ್ ಮಾತ್ರ ಹಿಂದೆ ಹಿಂದೆ ಹೋಗೋದನ್ನು ಬಿಟ್ಟಿರಲಿಲ್ಲ. ಇವನ ಬಗ್ಗೆ ಯುವತಿ ಪೋಷಕರಿಗೆ ಹೇಳಿದ್ದಳು ಎನ್ನಲಾಗಿದೆ.
ಶ್ರೀನಿವಾಸ್ ನನ್ನು ಕೊಂದು ನೇಣಿಗೆ ನೇತು ಹಾಕಿದ್ದಾರೆ ಎಂಬ ಆರೋಪವನ್ನು ಅವನ ಕುಟುಂಬದವರು ಮಾಡುತ್ತಿದ್ದಾರೆ. ಪ್ರೀತಿಸಿದ್ದಕ್ಕೆ ಕೊಲೆಯಾದನೋ ಅಥವಾ ಪ್ರೀತಿ ಸಿಗಲಿಲ್ಲ ಎಂದು ಆತ್ಮಹತ್ಯೆಗೆ ಶರಣಾದನೋ ಎಂಬುದು ತನಿಖೆಯಿಂದ ತಿಳಿಯಬೇಕಿದೆ.