ತುಮಕೂರು ಮಹಾನಗರ ಪಾಲಿಕೆ ಮಾಜಿ ಮೇಯರ್, ಹಾಲಿ ಸದಸ್ಯ ರವಿಕುಮಾರ್ ಅವರನ್ನು ದುಷ್ಕರ್ಮಿಗಳು ಕೊಲೆಗೈದಿದ್ದಾರೆ.
ನಗರದ ಬಟವಾಡಿಯಲ್ಲಿ ರವಿಕುಮಾರ್ ಬೆಳಗ್ಗೆ 8 ಗಂಟೆ ಸುಮಾರಿಗೆ ಟೀ ಕುಡಿಯುತ್ತಿರುವಾಗ ಟಾಟಾ ಏಸ್ ನಲ್ಲಿ ಬಂದ 7 ಮಂದಿ ದುಷ್ಕರ್ಮಿಗಳು ರವಿಕುಮಾರ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ರವಿಕುಮಾರ್ ಅವರ ಮುಖದ ಮೇಲೆ ಟೀ ಎರಚಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ತಲೆಗೆ ಹೊಡೆದು ಕೊಲೆಗೈದಿದ್ದಾರೆ ಎಂದು ತಿಳಿದು ಬಂದಿದೆ.
ಹಳೆ ದ್ವೇಷವೇ ಘಟನೆಗೆ ಕಾರಣ ಎನ್ನಲಾಗುತ್ತಿದೆ. ತನಿಖೆಯ ಬಳಿಕವಷ್ಟೇ ಸತ್ಯಾನುಸತ್ಯತೆ ಹೊರಬೀಳಲಿದೆ.