ಕನ್ನಡ ನ್ಯೂಸ್ ಚಾನಲ್ಗಳ ಟಿಆರ್ಪಿ ಸಮರದಲ್ಲಿ ಈ ವಾರವೂ ಟಿವಿ9 ಕನ್ನಡ ಮತ್ತೆ ಬಾದ್ ಷಾ ಆಗಿ ಹೊರಹೊಮ್ಮಿದೆ. 39ನೇ ವಾರದ ಬಾರ್ಕ್ ರೇಟಿಂಗ್ಸ್ ಪ್ರಕಾರ ಈ ವಾರ 127 ಜಿಆರ್ಪಿಯೊಂದಿಗೆ ಟಿವಿ9 ಕನ್ನಡ ರಾಜ್ಯದ ನಂಬರ್ ಒನ್ ನ್ಯೂಸ್ ಚಾನಲ್ ಎನಿಸಿಕೊಂಡಿದೆ. ಟಿವಿ9 ಹೊರತಾಗಿ ಬೇರೆ ಯಾವ ವಾಹಿನಿಯೂ ಮೂರಂಕಿ ದಾಟುತ್ತಿಲ್ಲ ಎನ್ನುವುದೇ ವಿಶೇಷ. 69 ಜಿಆರ್ಪಿಯೊಂದಿಗೆ ಪಬ್ಲಿಕ್ಟಿವಿ ಎರಡನೇ ಸ್ಥಾನದಲ್ಲಿದ್ದು, 53 ಅಂಕಿಯೊಂದಿಗೆ ಸುವರ್ಣ ನ್ಯೂಸ್ ಮೂರನೇ ಸ್ಥಾನಕ್ಕೆ ತೃಪ್ತಿ. ಇನ್ನು ಬಲಿಷ್ಠ ತಂಡವನ್ನ ಕಟ್ಟಿಕೊಂಡಿರೋ ನ್ಯೂಸ್18 ಕನ್ನಡ 37ಕ್ಕೆ ಸಮಾಧಾನ ಪಟ್ಟುಕೊಂಡಿದೆ. 24 ಜಿಆರ್ಪಿಯೊಂದಿಗೆ ದಿಗ್ವಿಜಯ ವಾಹಿನಿ ಐದನೇ ಸ್ಥಾನದಲ್ಲಿದೆ. ಉಳಿದಂತೆ ಬಿಟಿವಿ-18, ಟಿವಿ5-14 , ಪ್ರಜಾ ಟಿವಿ -12, ಕಸ್ತೂರಿ ನ್ಯೂಸ್- 9 ಹಾಗೂ ರಾಜ್ ನ್ಯೂಸ್ – 8 ಜಿಆರ್ಪಿ ಪಡೆದಿವೆ. ಇತ್ತೀಚೆಗಷ್ಟೇ ಆರಂಭವಾದ ನ್ಯೂಸ್ ಎಕ್ಸ್-4 ಹಾಗೂ ಟಿವಿ1 – 5 ಜಿಆರ್ಪಿ ಪಡೆದುಕೊಂಡಿವೆ.
ಈ ವಾರವೂ ಟಿವಿ9 ಕನ್ನಡವೇ ಬಾದ್ ಷಾ..!
Date:






