ಒಳ್ಳೆಯ ಮುಹೂರ್ತ ನೋಡಿ ನಾನು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗ್ತೀನಿ ಎಂದು ಅರಣ್ಯ ಸಚಿವ ಆರ್.ಶಂಕರ್ ಹೇಳಿದ್ದಾರೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರು ಕ್ಷೇತ್ರದಿಂದ ಕೆಪಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಪ್ರಯತ್ನದಲ್ಲೇ ಶಾಸಕರಾಗಿದ್ದೂ ಅಲ್ಲದೆ, ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿರುವ ಆರ್.ಶಂಕರ್ ಅವರಿಗೆ ಕಾಂಗ್ರೆಸ್‌ಗೆ ಸೇರಲು ಆ ಪಕ್ಷದಿಂದ ಒತ್ತಡವಿತ್ತು. ಆದರೆ, ಮೈತ್ರಿ ಸರ್ಕಾರದ ಆಯಸ್ಸಿನ ಬಗ್ಗೆ ಅನುಮಾನ ಹೊಂದಿರುವ ಶಂಕರ್ ಕಾಂಗ್ರೆಸ್ ಸೇರಲು ಹಿಂದೇಟು ಹಾಕುತ್ತಿದ್ದಾರೆ. ಇವರು ಬಿಜೆಪಿ ಸೇರ್ತಾರೆ ಅಂತ ಹೇಳಲಾಗಿತ್ತು. ಆದರೆ, ಇದೀಗ ಶಂಕರ್ ಒಳ್ಳೆಯ ದಿನ ನೋಡಿ ಕಾಂಗ್ರೆಸ್ ಸೇರ್ತೀನಿ ಅಂದಿದ್ದಾರೆ.