ಪ್ರೋ ಕಬಡ್ಡಿ ಲೀಗ್ ನ ಆರನೇ ಸೀಸನ್ ಭಾನುವಾರದಿಂದ ಶುರುವಾಗ್ತಿದೆ. ಈ ಬಾರಿ 12 ತಂಡಗಳು ಲೀಗ್ ನಲ್ಲಿ ಪಾಲ್ಗೊಳ್ಳಲಿವೆ. 12 ರಾಜ್ಯಗಳಲ್ಲಿ ಪಂದ್ಯ ನಡೆಯಲಿದೆ. ಲೀಗ್ ನ ಮೊದಲ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ. ಪಾಟ್ನಾ ಪೈರೇಟ್ಸ್ ಮತ್ತು ತಮಿಳು ತಲೈವಾಸ್ ಮಧ್ಯೆ ನಡೆಯಲಿದೆ. ಇದ್ರ ಜೊತೆ ಯು ಮುಂಬಾ ಹಾಗೂ ಜೈಪುರ ಪಿಂಕ್ ಪ್ಯಾಂಥರ್ಸ್ ನಡುವೆಯೂ ಭಾನುವಾರವೇ ಸೆಣೆಸಾಟ ನಡೆಯಲಿದೆ.
ಹಾಲಿ ಚಾಂಪಿಯನ್ ಪಾಟ್ನಾ ಮತ್ತೊಮ್ಮೆ ಡುಬ್ಕಿ ಕಿಂಗ್ ಪ್ರದೀಪ್ ಜೊತೆ ಪ್ರಶಸ್ತಿ ಗೆಲ್ಲುವ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ. ಈ ಬಾರಿ ಲೀಗ್ ಹಿಂದಿನ ಬಾರಿಗಿಂತ ಮತ್ತಷ್ಟು ಆಕರ್ಷಕವಾಗಿರಲಿದೆ. ಇನ್ನು ಬೆಂಗಳೂರು ಬುಲ್ಸ್ ಉತ್ತಮ ಪ್ರದರ್ಶನಕ್ಕೆ ಸಜ್ಜಾಗಿದೆ.
ಈ ಬಾರಿ ರೋಹಿತ್ ಕುಮಾರ್ ತಂಡವನ್ನು ಮುನ್ನೆಡೆಸಲಿದ್ದಾರೆ. ರಣಧೀರ್ ಸಿಂಗ್ ಕೋಚ್ ಆಗಿ ಮುಂದುವರೆಯಲಿದ್ದಾರೆ. ಜನವರಿ ಐದರಂದು ಮುಂಬೈನಲ್ಲಿ ಫೈನಲ್ ಪಂದ್ಯ ನಡೆಯಲಿದೆ.
Bengaluru Bulls Full Team
Pawan Kumar, Mahender Singh, Kashiling Adake, Jasmer Singh Gulia, Raju Lal Choudhary, Dong Ju Hong, Gyung Tae Kim, Sandeep, Jawahar Vivek, Mahesh Maruti Magdum, Mahendra Singh Dhaka, Nitesh BR, Anil, Anand V, Rohit,
Retained players – Rohit Kumar
FKH players – Harish Naik, Amit Sheoran, Sumit Singh