ಇನ್ನೇನು ಸಾಲು ಸಾಲು ಹಬ್ಬಗಳ ಸಂಭ್ರಮ. ಬಿಗ್ ಬಿಯನ್ ಡೇ ಸೇಲ್ ಆಫರ್ ಮೂಲಕ ಫ್ಲಿಪ್ ಕಾರ್ಟ್ ಗ್ರಾಹಕರ ಸಂಭ್ರಮ ಹೆಚ್ಚಿಸಿದೆ.
ಅಕ್ಟೋಬರ್ 10 ರ ಮಧ್ಯರಾತ್ರಿಯಿಂದ 14 ವರೆಗೆ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ನೀಡಿದ್ದು, ಅತೀ ಕಡಿಮೆ ಬೆಲೆಗೆ ಮೊಬೈಲ್ ಫೋನ್ ಗಳನ್ನು ಮಾರಾಟ ಮಾಡುತ್ತಿದೆ. ಬರೋಬ್ಬರಿ ಶೇ . 62 ರಷ್ಟು ಆಫರ್ ನೀಡಿದೆ.
ಸ್ಯಾಮ್ಸಂಗ್, ಕ್ಸಿಯೋಮಿ, ಒಪ್ಪೋ, ಹಾನರ್, ರಿಯಲ್‌ಮಿ, ಇನ್‌ಫಿನಿಕ್ಸ್ ಒಳಗೊಂಡಂತೆ ಅನೇಕ ಬ್ರ್ಯಾಂಡ್ ನ ಮೊಬೈಲ್‌ಗಳು ರಿಯಾಯ್ತಿಯಲ್ಲಿ ದೊರೆಯಲಿವೆ. 45,990 ರೂನ ಸ್ಯಾಮ್ಸಂಗ್ ಗೆಲೆಕ್ಸಿ ಜಿ8 20,000 ರೂಪಾಯಿಗೆ ಸಿಗುತ್ತದೆ.
8,990 ರೂ ನ ರಿಯಲ್‌ಮಿ ಸಿ1 ಸ್ಮಾರ್ಟ್‌ಫೋನ್ ಬಿಗ್ ಬಿಲಿಯನ್ ಡೇ ಸೇಲ್ ಮೂಲಕ 6,999 ರೂಗೆ, 6,999 ರೂನ ಇನ್‌ಫಿನಿಕ್ಸ್ 4,999 ರೂಗೆ, 7,990 ರೂಪಾಯಿಗಳ ಪನಾಸೋನಿಕ್ ಸ್ಮಾರ್ಟ್‌ಫೋನ್ ಕೇವಲ 2,999 ರೂಗೆ,
8,999 ರೂಪಾಯಿ ಮೌಲ್ಯದ ಹಾನರ್ 6,499 ರೂಗೆ ಲಭ್ಯ. ಇಷ್ಟೇ ಅಲ್ಲದೆ ಇನ್ನೂ ಅನೇಕ ಮೊಬೈಲ್ ಗಳು ತುಂಬಾ ಕಡಿಮೆ ಬೆಲೆಗೆ ನಿಮಗೆ ಸಿಗಲಿದೆ.