ಸೆಕ್ಸ್ ಮಾಡುವುದಕ್ಕೆ ಒಪ್ಪದೇ ಇರೋ ಕಾರಣಕ್ಕಾಗಿ ಮಹಿಳೆಯನ್ನು ವಾಚ್‍ಮ್ಯಾನ್ ಒಬ್ಬ ಇರಿದು ಕೊಲೆ ಮಾಡಿದ್ದು, ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
ತನ್ನ ಮತ್ತು ತನ್ನ ಸ್ನೇಹಿತನ ಜೊತೆ ಸೆಕ್ಸ್ ಮಾಡ್ದೇ ಇರೋದೇ ಕೊಲೆಗೆ ಕಾರಣ ಎಂದಿದ್ದಾನೆ.
ಅಕ್ಟೋಬರ್ 6ರಂದು 42 ವರ್ಷದ ಮಹಿಳೆಯ ಮೃತದೇಹವೊಂದು ದೆಹಲಿಯ ವಿವೇಕ್ ವಿಹಾರ್ ಪ್ರದೇಶದ ಮನೆಯೊಂದರಲ್ಲಿ ಸಿಕ್ಕಿತ್ತು. ಇದೇ ಮನೆಯಲ್ಲಿ ವಾಚ್‍ಮ್ಯಾನ್ ಮಹಿಳೆಯನ್ನು ಕರೆದುಕೊಂಡು ಬಂದು ಅನೈತಿಕ ಚಟುವಟಿಕೆ ನಡೆಸುತ್ತಿದ್ದನು. ಇದನ್ನು ಗಮನಿಸಿದ್ದ ಸ್ಥಳೀಯರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಚ್‍ಮ್ಯಾನ್ ಕೈವಾಡವಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದರು.
ವಾಚ್ ಮ್ಯಾನ್ ಉತ್ತರ ಪ್ರದೇಶದ ಬಿಜನೂರ್ ಮೂಲದ ಸುಶೀಲ್ (40). ಈತನನ್ನು ಪೊಲೀಸರು ವಿಚಾರಣೆ ನಡೆಸಿದ್ದು ಸತ್ಯ ಒಪ್ಕೊಂಡಿದ್ದಾನೆ.
ವಿಚಾರಣೆ ವೇಳೆ ಸುಶೀಲ್ ಮಹಿಳೆಯನ್ನು ತಾನೇ ಕೊಲೆ ಮಾಡಿರೋದಾಗಿ ಹೇಳಿದ್ದು, ನನ್ನ ಸ್ನೇಹಿತ ಹಾಗೂ ನನ್ನೊಂದಿಗೆ ಸೆಕ್ಸ್ ಮಾಡಲು ಮಹಿಳೆ ನಿರಾಕರಿಸಿದ್ದರಿಂದ ಕೊಲೆ ಮಾಡಿದೆ ಎಂದು ತಿಳಿಸಿದ್ದಾನೆ.