ಗರ್ಭಿಣಿಯರು ಆರೋಗ್ಯದ ಕಡೆಗೆ ತುಂಬಾನೇ ಗಮನ ಕೊಡಬೇಕು. ಅವರ ಆರೋಗ್ಯದ ಮೇಲೆ ಅವರಿಗೆ ಹುಟ್ಟುವ ಮಗುವಿನ ಆರೋಗ್ಯ ನಿಂತಿರುತ್ತೆ.
ಗರ್ಭಿಣಿಯರು ಚೆನ್ನಾಗಿ ಊಟ ಮಾಡ್ಬೇಕು. ಹಣ್ಣು-ತರಕಾರಿ ಸೇವಿಸ್ಬೇಕು. ಪೌಷ್ಠಿಕಾಂಶ ಬರಿತ ಆಹಾರ ಸೇವನೆ ಗರ್ಭಿಣಿಯರಿಗೆ ಬಹುಮುಖ್ಯ.
ಚೆನ್ನಾಗಿ ಹಾಲುಕುಡಿಬೇಕು, ತರಕಾರಿ, ಹಣ್ಣು ತಿನ್ಬೇಕು. ಆದ್ರೆ ಈ ಕೆಳಗಿನ ಮೂರು ಹಣ್ಣುಗಳನ್ನು ಯಾವ್ದೇ ಕಾರಣಕ್ಕೂ ಕೂಡ ತಿನ್ನಲೇ ಬಾರದು.
* ಪಪ್ಪಾಯ : ಗರ್ಭಿಣಿಯರು ಪಪ್ಪಾಯವನ್ನು ತಿನ್ನಲೇ ಬಾರದು. ಪಪ್ಪಾಯ ಮಲಬದ್ಧತೆ ಸಮಸ್ಯೆ ಸೇರಿದಂತೆ ಹತ್ತಾರು ಸಮಸ್ಯೆಗಳಿಗೆ ರಾಮಬಾಣ. ಆದ್ರೆ, ಗರ್ಭಿಣಿಯರಿಗೆ ಶತ್ರು. ಇದರಿಂದ ದೇಹದ ಉಷ್ಣಾಂಶ ಹೆಚ್ಚುವುದು. ಆದ್ದರಿಂದ ಗರ್ಭಾವಸ್ಥೆಯಲ್ಲಿ ಸೇವಿಸಿದರೆ ಗರ್ಭಪಾತ ಆಗುತ್ತದೆ.
ಅನಾನಸ್ : ಇದರಲ್ಲಿ ಆಮ್ಲೀಯ ಗುಣ ಹೆಚ್ಚಿರುವುದರಿಂದ ಗರ್ಭಿಣಿಯರು ಇದನ್ನು ತಿನ್ನಲೇ ಬಾರದು. ಹೊಟ್ಟೆ ಉರಿ, ಎದೆ ಉರಿ, ಗರ್ಭಕೋಶ ಕುಗ್ಗುವುದು ಮೊದಲಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ತುಂಬಾ ಗಳಿತ ಮಾವು : ಮಾವಿನ ಹಣ್ಣಿನಲ್ಲಿ ಅತಿಯಾದ ಸಕ್ಕರೆ ಅಂಶವಿರುವಿದರಿಂದ ಮಧುಮೇಹ ಸ್ಥಿತಿಗೆ ಕಾರಣ ಆಗ್ಬಹುದು. ಆದ್ರಿಂದ ಅತಿಯಾಗಿ ಗಳಿತ ಮಾವಿನ ಹಣ್ಣುಗಳನ್ನು ಗರ್ಭಿಣಿಯರು ತಿನ್ನಲೇ ಬಾರದು.