ರಾತ್ರಿ ಆಕಾಶದಲ್ಲಿ ಮಿನುಗುವ ನಕ್ಷತ್ರಗಳ ನ್ನು ನೋಡಲು ಎಷ್ಟು ಚಂದ. ನಕ್ಷತ್ರಗಳ ಬೆಳಕಿನಲ್ಲಿ ಕಾಲ ಕಳೆಯುವ ಮಜಾನೇ ಬೇರೆ. ಹೀಗಿರುವಾಗ ಭೂಮಿ ಮೇಲೆ, ಸುಂದರ ಬೀಚ್ ನಲ್ಲಿ ನಕ್ಷತ್ರಗಳನ್ನು ಕಣ್ತುಂಬಿಕೊಳ್ಳೋದು ಎಷ್ಟೊಂದು ಚಂದ ಅಲ್ವಾ?
ಹನಿಮೂನ್ ಗೆ ಹೇಳಿ ಮಾಡಿಸಿದಂತಿರೋ ಮಾಲ್ಡೀವ್ಸ್ ನಲ್ಲಿ ರಾತ್ರಿಯ ಸೌಂದರ್ಯದಲ್ಲಿ ನಿಜಕ್ಕೂ ನೀವು ಕಳೆದು ಹೋಗುತ್ತೀರಿ. ಅಲ್ಲಿನ ಸ್ಟಾರಿ ಬೀಚ್ ನಿಮ್ಮನ್ನು ಕಣ್ಮನ ಸೆಳೆಯುತ್ತದೆ.
ಈ ಬೀಚ್ ಕೆಂಪು ಬಣ್ಣದಿಂದ ಕೂಡಿದೆ. ನೀರಿನಲ್ಲಿ ತೇಲುವ ಒಂದು ರೀತಿಯ ಸಸ್ಯಗಳು ಇದಕ್ಕೆ ಕಾರಣ.ನೀರಿನ ಅಲೆಗಳು ಎದ್ದ ತಕ್ಷಣ ಈ ತೇಲುವ ಸಸ್ಯಗಳು ಆಮ್ಲಜನಕದೊಂದಿಗೆ ಸೇರಿ ಬೆಳಕು ಉತ್ಪತ್ತಿಯಾಗಿ ಅದು ರಾತ್ರಿ ಹೊಳೆಯುತ್ತದೆ. ಹೀಗೆ ಸ್ಟಾರಿ ಬೀಚ್ ತೇಲುವ ನಕ್ಷತ್ರಗಳ ಬೀಚ್ ಆಗಿದೆ.