ನಮ್ಮ ದೇಶದಲ್ಲಿ ವಿದ್ಯುತ್ ಸಮಸ್ಯೆ ದೊಡ್ಡದಾಗಿ ಕಾಡುತ್ತಿದೆ. ಲೋಡ್ ಶೆಡ್ಡಿಂಗ್ ಹೆಸರಿನಲ್ಲಿ ಪದೇ ಪದೇ ವಿದ್ಯುತ್ ನ್ನು ಕಡಿತಗೊಳಿಸಲಾಗುತ್ತದೆ. ಆದ್ದರಿಂದ ಜನಸಾಮಾನ್ಯರು ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕೆಲವರು ಸೋಲಾರ್ ಲ್ಯಾಂಪ್ ಖರೀದಿಸಿದರೆ, ಇನ್ನೂ ಕೆಲವರು ಇನ್ವರ್ಟರ್ ಅಳವಡಿಸುತ್ತಾರೆ. ಆದರೆ ಫಿಲಿಪ್ಪೈನ್ಸ್ ನಲ್ಲಿ ನೀರು ಮತ್ತು ಉಪ್ಪಿನಿಂದಲೇ ವಿದ್ಯುತ್ ಉತ್ಪಾದಿಸುತ್ತಿದ್ದು, ವಿದ್ಯುತ್ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಂಡಿದ್ದಾರೆ..!
ಯೆಸ್.. ಫಿಲಿಪ್ಪೈನ್ಸ್ ವಿಜ್ಞಾನಿಗಳು ಉಪ್ಪು ಮತ್ತು ನೀರಿನಿಂದಲೇ ವಿದ್ಯುತ್ ಉತ್ಪಾದಿಸುವ ತಂತ್ರಜ್ಞಾನವನ್ನು ಕಂಡುಹಿಡಿದಿದ್ದಾರೆ..! ಈ ಲ್ಯಾಂಪ್ ತುರ್ತು ಮತ್ತು ಫೋರ್ಟ ಬಲ್ ಲೈಟಿಂಗ್ ಉದ್ಯಮ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ ಎಂದು ಹೇಳಲಾಗುತ್ತಿದೆ. ಯಾವುದೇ ಇತರ ಪದಾರ್ಥಗಳನ್ನು ಬಳಸದೇ ಉಪ್ಪು ಮತ್ತು ನೀರಿನಿಂದ ತಯಾರಿಸಿರುವ ಈ ಲ್ಯಾಂಪ್ 8 ಗಂಟೆಗಳ ಕಾಲ ಬೆಳಕು ನೀಡಲಿದೆ.
ಒಂದು ಲೋಟ ನೀರು ಮತ್ತು 2 ಟೇಬಲ್ ಚಮಚ ಉಪ್ಪಿನ ಮಿಶ್ರಣದಿಂದ ಈ ಬೆಳಕನ್ನು ತಯಾರಿಸಬಹುದು. ಇದು 8 ಗಂಟೆಗಳ ಕಾಲ ಬೆಳಕನ್ನು ನೀಡುತ್ತದೆ. ಹಾಗೆಯೇ ಅಗತ್ಯವಿದ್ದರೆ ಸ್ವಲ್ಪ ಸಮುದ್ರ ನೀರನ್ನು ಬಳಸಬಹುದಾಗಿದೆ. ವಿಶೇಷವೆಂದರೆ ಇದರಿಂದ ಹೆಚ್ಚಿನ ತೊಂದರೆಯೂ ಇಲ್ಲ..! ಕೋಟ್ಯಾಂತರ ಜನರು ಬ್ಯಾಟರಿ ಆಪರೇಟೆಡ್ ಟ್ಯೂಬ್ ಲೈಟ್, ಲ್ಯಾಂಪ್ ಹಾಗೂ ಇತರೆ ಬೆಳಕಿನ ಗ್ಯಾಜೆಟ್ಸ್ ಗಳಿಗಾಗಿ ಹೆಚ್ಚು ಹಣ ವೆಚ್ಚ ಮಾಡುತ್ತಾರೆ. ಆದರೆ ಇದು ವೆಚ್ಚವೇ ಇಲ್ಲದೇ ತುರ್ತು ಸಂದರ್ಭಗಳಿಗಾಗಿ ಬಳಸಬಹುದಾದ ಲ್ಯಾಂಪ್ ಆಗಿದೆ.
ಈ ಸೂಪರ್ ಟೆಕ್ನಾಲಜಿ ವೈಕ್ತಿಕವಾಗಿ ಯಾರಾದರೂ ಯಾವುದೇ ತೊಂದರೆ ಇಲ್ಲದೇ ಬಳಸಬಹುದಾಗಿದ್ದು, ಇದನ್ನು ಫಿಲಿಪೈನ್ಸ್ ನ ಸ್ಥಳೀಯರು ಕೆರೋಸಿನ್ ಆಧಾರಿತ ಲ್ಯಾಂಪ್ ಬಳಸುತ್ತಾರೆ. ಇನ್ನೂ ಈ ಲ್ಯಾಂಪ್ ಇದೇ ವರ್ಷ ಮಾರುಕಟ್ಟೆಗೆ ಬರುವ ಸಾಧ್ಯತೆ ಇದ್ದು, ವಿದ್ಯುತ್ ಸಮಸ್ಯೆಗೆ ತಕ್ಕ ಪರಿಹಾರ ದೊರೆಯಲಿದೆ ಎಂದು ಅಂದಾಜಿಸಲಾಗಿದೆ.
- ರಾಜಶೇಖರ ಜೆ
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
114 ಸ್ವೀಪರ್ ಹುದ್ದೆಗೆ 19000 ಎಂಬಿಎ, ಇಂಜಿನಿಯರ್ ವಿದ್ಯಾರ್ಥಿಗಳಿಂದ ಅರ್ಜಿ..!
ಗೂಗಲ್ ಜೊತೆ ಕೇಂದ್ರ ಸರ್ಕಾರದ ಒಪ್ಪಂದ ಇಂದಿನಿಂದ ರೈಲು ನಿಲ್ದಾಣಗಳಲ್ಲಿ ಫ್ರೀ ವೈಫೈ..!
ಅಪ್ಪ ಕೂಲಿಯಾಳು, ಅಮ್ಮನಿಗೆ ಕಣ್ಣಿಲ್ಲ, ಕಿವಿ ಕೇಳದ ಮಗ ಮೂರು ಬಾರಿ ಐಎಎಸ್ ಪಾಸ್ ಮಾಡಿದ..!
ಕಣ್ಣಮುಂದೆಯೇ ಚಿನ್ನ ಕದ್ದೊಯ್ದ ಕಳ್ಳಿಯರು..! 4 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ನಾಜೂಕು ನಾರಿಯರು..!