ಈಗತಾನೆ ಕಾಲೇಜು ಮುಗಿಸಿದವರಿಗಾಗಿ…

Date:

 

ನೀವು ಈಗತಾನೆ ಕಾಲೇಜು ಮುಗಿಸಿ ಫಸ್ಟ್ ಟೈಮ್ ಆಫೀಸ್​ಗೆ ಹೋಗುತ್ತಿದ್ದರೆ, ನಿಮ್ಮ ಕಾಲೇಜು ಫ್ಯಾಷನ್​ನ ಬಣ್ಣ ಬಣ್ಣದ ಟೀಶರ್ಟ್​, ಟೋರ್ನ್ಡ್ ಪ್ಯಾಂಟ್​ಗಳನ್ನು ಹಾಕಬೇಡಿ. ಆಫೀಸ್​ಗಾಗಿಯೇ ಫಾರ್ಮಲ್​ ಪ್ಯಾಂಟ್​, ಬ್ಲೆಜರ್​, ಕಾಲರ್​ ಶರ್ಟ್​, ಸ್ಕರ್ಟ್​ನ ಖರೀದಿಸಿ. ಆಫೀಸ್​ ವಾತಾವರಣಕ್ಕೆ ಹೊಂದಿಕೊಳ್ಳುತ್ತಾ ಅಲ್ಲಿಗೆ ಹೊಂದುವ ಉಡುಪುಗಳ ಕಲೆಕ್ಷನ್​ ಮಾಡಿಕೊಳ್ಳುತ್ತಾ ಹೋಗಿ.

ನೀವು ಯಾವಾಗಲೂ ಡೆನಿಮ್​ ಜೀನ್ಸ್​ ಉಡುಪುಗಳನ್ನು ಧರಿಸುವವರಾದರೇ, ನಿಮ್ಮ ಸ್ಟೈಲ್​ಗೆ ತಕ್ಕಂತ ಡೆನಿಮ್​ ಉಡುಪುಗಳನ್ನು ಬಹುಕಾಲದಿಂದ ತೊಡುತ್ತಾ ಬಂದಿದ್ದರೇ ಮಾತ್ರ ಆಫೀಸ್​ಗೆ ಡೆನಿಮ್​ ಆಯ್ದುಕೊಳ್ಳಿ. ಪರನ್ಸಿಲ್​ ಸ್ಕರ್ಟ್​, ಡಾರ್ಕ್​ ಡೆನಿಮ್​ಗಳು ಆಫೀಶ್​ಗೆ ಸೂಕ್ತವಾಗಿವೆ. ಆದರೆ ಇಂತಹ ಉಡುಪುಗಳನ್ನು ಆಯ್ದುಕೊಳ್ಳುವ ಮೊದಲು ನಿಮಗೆ ಸೂಕ್ತವಾಗಿದೆಯೋ ಇಲ್ಲವೋ ಅನ್ನೊದನ್ನು ಪರೀಕ್ಷಿಸಿಕೊಳ್ಳಿ.

ಜರ್ಸಿ ಉಡುಪುಗಳು ಕಡಿಮೆ ಬೆಲೆಯಲ್ಲಿ ಹಾಗೂ ನಿಮಗೆ ಕಂಫರ್ಟ್​ಟೇಬಲ್​ ಆಗಿ ದೊರಕುತ್ತವೆ. ಆದರೆ ನಿಮ್ಮ ಆಫೀಸ್​ನ ವಾತಾವರಣಕ್ಕೆ ಜೆರ್ಸಿ ಉಡುಪು ಹೊಂದಿಕೆಯಾಗುತ್ತದೆಯೋ ಇಲ್ಲವೋ ನೋಡಿಕೊಳ್ಳಿ. ನಿಮ್ಮ ಆಫೀಸ್​ನಲ್ಲಿ ಎಲ್ಲರೂ ಕ್ಯಾಶುವಲ್​ ಆಗಿ ಬರುತ್ತಿದ್ದರೇ, ನಿಮ್ಮ ಕೆಲಸದಲ್ಲಿ ಅಧಿಕಾರಿಗಳನ್ನು ಭೇಟಿ ಮಾಡುವ ಪ್ರಮೆಯ ಬರುವುದಿಲ್ಲ ಎಂದಿದ್ದರೇ ಮಾತ್ರ ಜರ್ಸಿ ಉಡುಪುಗಳನ್ನು ಧರಿಸಿ.

ಫಾರ್ಮಲ್​ ಸ್ಕರ್ಟ್​ಗಳನ್ನು ಧರಿಸಿದಾಗ ಹೈ ಹೀಲ್ಸ್​ ಹಾಕಲೇಬೇಕೆಂದಿಲ್ಲ. ಯಂಗ್​ ಹಾಗೇ ಫ್ಯಾಷನೇಬಲ್​ ಆಗಿ ಕಾಣಿಸಲು ಲೋ ಹೀಲ್ಸ್​ ಕೂಡ ಧರಿಸಬಹುದು. ಇದು ನಿಮ್ಮ ಫಾರ್ಮಲ್​ ಬ್ಲೆಜರ್​ ಉಡುಪುಗಳಿಗೆ, ಸ್ಕರ್ಟ್​ಗಳಿಗೆ ಕೂಡ ಮ್ಯಾಚ್​ ಆಗುತ್ತದೆ.

ಸ್ಯಾಂಡಲ್ಸ್​ ಆಯ್ದುಕೊಳ್ಳುವಾಗ ಬೆರಳುಗಳು ಕಾಣುವಂತಹ ಓಪನ್​ ಟೋ ಪಾದರಕ್ಷೆಗಳು ಬೇಡ. ಆದಷ್ಟು ಕಾಲುಬೆರಳು ಮುಚ್ಚುವ ಸ್ಯಾಂಡಲ್ಸ್​ ಆಯ್ದುಕೊಳ್ಳಿ. ಇಲ್ಲದಿದ್ದರೇ ಕಾಲು ಬೆರಳಿನ ಸೌಂದರ್ಯ ಕಾಪಾಡಿಕೊಳ್ಳಲು ಪದೇ ಪದೇ ಪೆಡಿಕ್ಯೂರ್​ ಮಾಡಿಸಿಕೊಳ್ಳಬೇಕಾಗುತ್ತದೆ.

ಆಫೀಸ್​ಗೆ ಎಂದಿಗೂ ಶಾರ್ಟ್​ ಧರಿಸಬೇಡಿ. ಕೆಲವು ಆಫೀಸ್​ಗಳಲ್ಲಿ ಇಂತಹ ಶಾರ್ಟ್​ ಸ್ಕರ್ಟ್​, ಶಾರ್ಟ್​ ಪ್ಯಾಂಟ್ಸ್​ಗಳಿಗೆ ಸಂಪೂರ್ಣ ನಿಷೇಧಿವಿದೆ. ಇಂತಹ ಉಡುಪುಗಳು ತೀರಾ ಕ್ಯಾಷುವಲ್​ ಲುಕ್​ ನೀಡುತ್ತವೆ.

ಆತೀಯಾಗಿ ಬಣ್ಣಗಳಿರುವ, ಹೊಳೆಯುವ ಪಾರ್ಟಿವೇರ್​ ಉಡುಪುಗಳನ್ನು ಆಫೀಸ್​ಗೆ ಧರಿಸಬೇಡಿ. ಜೊತೆಗೆ ಅತಿಯಾದ ಮೇಕಪ್​ ಕೂಡ ಬೇಡ. ಆದಷ್ಟು ಕಡಿಮೆ ಮೇಕಪ್​ನಲ್ಲಿ ಸುಂದರವಾಗಿ ಕಾಣಿಸುವಂತೆ ನೋಡಿಕೊಳ್ಳಿ.

Share post:

Subscribe

spot_imgspot_img

Popular

More like this
Related

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ:...

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ ಬೆಂಗಳೂರು: ರಾಜ್ಯದ...

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...