ಇಡೀ ಒಂದು ನಗರ ಅಥವಾ ಊರಲ್ಲಿ ಒಬ್ಬನೇ ಒಬ್ಬ ವ್ಯಕ್ತಿ ಇರೋದು ಅಂದ್ರೆ ಯಾರೂ ನಂಬಲ್ಲ. ಆದ್ರೆ, ನೀವು ಇದನ್ನು ನಂಬಲೇ ಬೇಕು. ಜಪಾನಿನ ತೋಮಿಓಕೋ ಎಂಬ ನಗರದಲ್ಲಿ ಇರೋದು 58 ವರ್ಷದ ನಾವೋತೋ ಮುನ್ಸ್ಯುಮುರ ಎಂಬ ವ್ಯಕ್ತಿ ಮಾತ್ರ..!
ಮೀಡಿಯಾ ರಿಪೋರ್ಟ್ಸ್ ಅನುಸಾರ ಜ ತೋಮಿಓಕಾದಲ್ಲಿ 2010ರವರೆಗೆ ಅಲ್ಲಿನ ಜನಸಂಖ್ಯೆ 15 ಸಾವಿರದವರೆಗೆ ಇತ್ತು. ನಂತರ 2011ರಲ್ಲಿ ಸುನಾಮಿ ಬಂದಿತ್ತು ಹಾಗೂ ಫುಖೋಶಿಮ ನ್ಯೂಕ್ಲಿಯರ್ ಪ್ಲಾಂಟ್‌ನಿಂದ ಅನಿಲ ಸೋರಿಕೆಯಾಗತೊಡಗಿತು.
ಇದರ ರೇಡಿಯೇಶನ್ ಎಲ್ಲಾ ಕಡೆಗಳಲ್ಲೂ ಹರಡಲು ಆರಂಭವಾಯಿತು. ತೋಮಿಓಕಾ ಕೂಡ ಇದರ ಬಳಿಯೆ ಇತ್ತು. ರೇಡಿಯೇಶನ್‌ನಿಂದಾಗಿ ಎಲ್ಲರೂ ಈ ಜಾಗದಿಂದ ಸ್ಥಳಾಂತರಗೊಂಡರು ಆದ್ರೆ ಇಲ್ಲಿನ ದನ ಕರುಗಳಿಗೆ ಆಹಾರ ಕೊಡೋಕೆ ಯಾರೂ ಇಲ್ಲ ಅಂತ ಅದೇ ನಗರದಲ್ಲಿ ಒಬ್ಬರೇ ಉಳಿದುಕೊಂಡಿದ್ದಾರೆ..!