ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಈಗಾಗಲೇ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿ ಆಗಿದೆ. 2019 ರ ವರ್ಲ್ಡ್ ಕಪ್ ನಂತ್ರ ಒಡಿಐ ಮತ್ತು ಟಿ20 ಗೂ ಧೋನಿ ನಿವೃತ್ತಿ ಘೋಷಿಸೋ ಸಾಧ್ಯತೆ ಹೆಚ್ಚಿದೆ.
ಧೋನಿ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ಮೇಲೆ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎಂಬ ಮಾತು ಕೇಳಿಬರ್ತಿದೆ. ಧೋನಿ ಬಿಜೆಪಿ ಪರ ಪ್ರಚಾರ ಮಾಡುತ್ತಾರೆ ಎಂಬ ಸುದ್ದಿ ಒಂದ್ ಕಡೆ ಹರಿದಾಡ್ತಿದೆ. ಇನ್ನೊಂದೆಡೆ ಬಿಜಿಪಿ ಅಭ್ಯರ್ಥಿಯಾಗಿ ಜಾರ್ಖಂಡ್ ನಿಂದ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿಯೂ ಇದೆ.
ಧೋನಿ ಇತ್ತೀಚೆಗೆ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಅವರನ್ನು ತಂಡದಿಂದ ಕೈ ಬಿಡಬೇಕು ಎಂಬ ಮಾತು ಕೇಳಿ ಬರ್ತಿದೆ.ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರೋ 5 ಪಂದ್ಯಗಳ ಏಕದಿನ ಸರಣಿಯ ಉಳಿದ 4 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ತನ್ನ ಅವಶ್ಯಕತೆ ತಂಡಕ್ಕಿದೆ ಅಂತ ಸಾಭೀತುಪಡಿಸ್ತಾರಾ ಎಂದು ಕಾದುನೋಡೋಣ.