ನಟಿ ಶ್ರುತಿ ಹರಿಹರನ್ ನಟ ಅರ್ಜುನ್ ಸರ್ಜಾ ವಿರುದ್ಧ ಮಾಡಿರೋ ಲೈಂಗಿಕ ಕಿರುಕುಳ ಆರೋಪ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಎಬ್ಬಿಸಿದೆ. ಶ್ರುತಿ ಅರ್ಜುನ್ ಸರ್ಜಾ ಅವ್ರ ಫ್ಯಾನ್ ಅಂತ ಹೇಳುತ್ತಾ ಹೇಳುತ್ತಾ ಮಸಿ ಬಳಿಯೋ ಕೆಲಸ ಮಾಡಿದ್ರಾ ಎಂಬ ಪ್ರಶ್ನೆ ಮೂಡಿದೆ.
ಅರ್ಜುನ್ ಸರ್ಜಾ ಅವರ ಪರ ಸಾಕಷ್ಟು ಜನ ಮಾತಾಡ್ತಿದ್ದಾರೆ . ಮಗಳು ಐಶ್ವರ್ಯ ಕೂಡ ಅಪ್ಪನ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಶ್ರುತಿ ಹರಿಹರನ್ ಪಬ್ಲಿಸಿಟಿಗಾಗಿ ಹೀಗೆ ಚೀಪ್ ಗಿಮಿಕ್ ಮಾಡ್ತಿದ್ದಾರೆ ಎಂದಿದ್ದ ಐಶ್ವರ್ಯ , ಈಗ ಶ್ರುತಿ ಹೇಳೆಕೆ ಹಿಂದೆ ಮೈನಾ ಚೇತನ್ ಅಲಿಯಾಸ್ ಚೇತನ್ ಅಹಿಂಸ ಕೈವಾಡ ಇದೆ ಎಂದು ಹೇಳಿದ್ದಾರೆ.
ಅರ್ಜುನ್ ಸರ್ಜಾ ನಿರ್ದೇಶನದ ಮಗಳು ಐಶ್ವರ್ಯ ಳ ಫಸ್ಟ್ ಮೂವಿ ‘ಪ್ರೇಮ ಬರಹ’ ಕ್ಕೆ ನಾಯಕ ಚಂದನ್ ಬದಲು ಚೇತನ್ ಫಸ್ಟ್ ಸೆಲೆಕ್ಟ್ ಆಗಿದ್ರಂತೆ. ಅರ್ಜುನ್ ಚೇತನ್ ಗೆ 10 ಲಕ್ಷ ರೂ ಅಡ್ವಾನ್ಸ್ ಕೂಡ ಕೊಟ್ಟಿದ್ರಂತೆ. ಕಾರಣಾಂತರಿಂದ ಚೇತನ್ ಬದಲಿಗೆ ಅರ್ಜುನ್ ಸರ್ಜಾ ಚಂದನ್ ಅವ್ರನ್ನು ಹಾಕಿಕೊಂಡ್ರಂತೆ. ಚೇತನ್ ತಗೊಂಡಿದ್ದ ಅಡ್ವಾನ್ಸ್ ಕೂಡ ವಾಪಸ್ಸು ಕೊಡ್ಲಿಲ್ಲ ಎಂಬ ಆರೋಪ ಇದೆ. ಇದೇ ಕಾರಣಕ್ಕೆ ಚೇತನ್ ಗೆ ಅರ್ಜುನ್ ಸರ್ಜಾ ಕಂಡ್ರೆ ಆಗಲ್ಲ ಎಂದು ಐಶ್ವರ್ಯ ಹೇಳಿದ್ದಾರೆ.
ಇದೇ ಕಾರಣಕ್ಕೆ ಚೇತನ್ ಶ್ರುತಿ ಮೂಲಕ ತನ್ನ ಸೇಡು ತೀರಿಸಿಕೊಳ್ತಿದ್ದಾರೆ ಅನ್ನೋದು ಆರೋಪ.
ಇನ್ನು ಚೇತನ್ ವಿರುದ್ಧ ಕರ್ನಾಟಕ ಚಲಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದ್ ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶ್ರುತಿ ಫಿಲ್ಮ್ ಛೇಂಬರ್ ಗಮನಕ್ಕೆ ತರದೇ ನೇರವಾಗಿ ಮೀಡಿಯಾ ಮುಂದೆ ಹೋಗಿರೋದಕ್ಕೆ ಛೇಂಬರ್ ಅಧ್ಯಕ್ಷ ಚಿನ್ನೆಗೌಡ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.