ಜನ ಮೀಡಿಯಾದಲ್ಲಿ ಬರೋದೆಲ್ಲಾ ಸತ್ಯ ಎಂಬಿ ನಂಬಿರ್ತಾರೆ. ದೃಶ್ಯಮಾಧ್ಯಮ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಬರುವ ಎಲ್ಲಾ ಸುದ್ದಿಗಳನ್ನು ನಂಬಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಬಹುತೇಕ ಟೆಲಿವಿಷನ್ ವಾಹಿನಿಗಳು ಟಿಆರ್ ಪಿಗೆ ಸುದ್ದಿ ಹುಟ್ಟು ಹಾಕುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಮಾಡಲು ಕೆಲಸ ಇಲ್ಲದ ಕಿಡಿಗೇಡಿಗಳಿಗೆ ಸುಳ್ ಸುದ್ದಿ ಹಬ್ಬಿಸೋದೆ ಕೆಲಸ. ಆದರೆ, ಈ ದೇಶದಲ್ಲಿ ಸುಳ್ ಸುದ್ದಿ ಮಾಡಿದ್ರೆ ದಂಡ ಹಾಕ್ತಾರೆ.
ಹಾಗಂತ ಇದು ಎಲ್ಲಾ ವರದಿಗಳಿಗೆ ಅನ್ವಯ ಆಗಲ್ಲ. ಬರೀ ಹವಮಾನ ವರದಿಗೆ ಮಾತ್ರ ಅನ್ವಯ..!
ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಹವಮಾನ ವರದಿಗಾರರು ಸುಳ್ಳು ಸುಳ್ಳು ಹವಮಾನ ವರದಿ ಮಾಡಿದರೆ ಅವರಿಗೆ ದಂಡ ಹಾಕುತ್ತಾರೆ.
ಹೀಗೆ ಇಂಥಾ ಕಾನೂನು ಎಲ್ಲಾ ಕಡೆ, ಎಲ್ಲಾ ವರದಿಗಾರಿಕೆಗೂ ಸಂಬಂಧಪಟ್ಟಂತೆ ಜಾರಿ ಆದ್ರೆ ಸುಳ್ ಸುದ್ದಿ ಹಬ್ಬುವುದು ತಪ್ಪುತ್ತಿತ್ತೇನೋ..?