ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಇತ್ತೀಚೆಗೆ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುತ್ತಿಲ್ಲ.
ಧೋನಿ 2019ರ ವರ್ಲ್ಡ್ ಕಪ್ ಬಳಿಕ ಇಂಟರ್ ನ್ಯಾಷನಲ್ ಕ್ರಿಕೆಟಿಗೆ ಗುಡ್ ಬೈ ಹೇಳ್ತಾರೆ ಎಂದು ಹೇಳಲಾಗಿತ್ತು. ಆದ್ರೆ, ಈಗ ಸದ್ಯ ವೆಸ್ಟ್ ಇಂಡೀಸ್ ವಿರುದ್ಧದ ಟೂರ್ನಿಯೇ ಕೊನೆಯ ಇಂಟರ್ ನ್ಯಾಷನಲ್ ಕ್ರಿಕೆಟ್ ಟೂರ್ನಿ ಎಂಬ ಮಾತು ಬಲವಾಗಿ ಕೇಳಿಬಂದಿದೆ. ಈಗಾಗಲೇ ಟೆಸ್ಟ್ ಕ್ರಿಕೆಟ್ ನಿಂದ ದೂರ ಸರಿದಿರುವ ಧೋನಿ ಒಡಿಐ ಮತ್ತು ಟಿ20 ಗೂ ನಿವೃತ್ತಿ ಘೋಷಿಸುವ ಕಾಲ ದೂರವಿಲ್ಲ.
ಹೀಗಿರುವಾಗ ಧೋನಿ ಕ್ರಿಕೆಟ್ ಬಳಿಕ ಏನ್ ಮಾಡ್ತಾರೆ ಅನ್ನೋ ಪ್ರಶ್ನೆ ಕಾಡೋದು ಕಾಮನ್. ಇದಕ್ಕೆ ಉತ್ತರ ರಾಜಕೀಯ..
ಹೌದು ಮಾಹಿ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಮೇಲೆ ರಾಜಕಾರಣಿ ಆಗುತ್ತಾರೆ ಎಂಬ ಮಾತಿದೆ. ಧೋನಿ ಬಿಜೆಪಿ ಪರ ಬ್ಯಾಟಿಂಗ್ ಮಾಡುವುದಲ್ಲದೆ ಜಾರ್ಖಂಡ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ಎನ್ನಲಾಗುತ್ತಿದೆ.