ಕೂದಲು ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ . ಕೂದಲು ಉದುರುವಿಕೆ ಸಮಸ್ಯೆ ನಮ್ಮ ಸೌಂದರ್ಯವನ್ನು ಕಿತ್ತುಕೊಳ್ಳೋದ್ರಿಂದ ನಾವು ಮಾನಸಿಕವಾಗಿ ಕುಗ್ಗುವ ಸಾಧ್ಯತೆಯೂ ಇದೆ. ಹೀಗಾಗಿ ಕೂದಲ ಆರೋಗ್ಯ ಮತ್ತು ಕೂದಲು ಉದುರುವುದನ್ನು ತಪ್ಪಿಸಲು ಸಾಕಷ್ಟು ತಲೆಕೆಡಿಸಿಕೊಳ್ತೀವಿ, ಖರ್ಚು ಮಾಡ್ತೀವಿ.
ಹಾಗೆಯೇ ಹಿಂದಿ ಬಿಗ್ ಬಾಸ್ ನ ಸ್ಪರ್ಧಿಯೊಬ್ಬರು ಎಷ್ಟು ಖರ್ಚು ಮಾಡಿದ್ದಾರೆ ಗೊತ್ತಾ?
ಬಿಗ್ಬಾಸ್ ಸೀಸನ್ 12ರಲ್ಲಿ ಭಾಗಿಯಾಗಿರುವ ಅನೂಪ್ ಜಲೋಟ ಇದೀಗ ತಮ್ಮ ಕೂದಲಿನ ಸೀಕ್ರೆಟ್ವೊಂದನ್ನ ಬಿಟ್ಟುಕೊಟ್ಟಿದ್ದಾರೆ. ತನಗೆ ಮುಂದಲೆ ಬಾಲ್ಡ್ ಆಗಿತ್ತು ಹಾಗಾಗಿ ತಾನು ಹೇರ್ ಟ್ರಾನ್ಸ್ಪ್ಲಾಂಟ್ ಮಾಡಿಸಿದ್ದು 1ಕೂದಲಿಗೆ 100ರೂಪಾಯಿ ಕೊಟ್ಟಿದ್ದೇನೆ. ಒಟ್ಟಾರೆ ನಾನು 7000 ಕೂದಲನ್ನು ಟ್ರಾನ್ಸ್ಪ್ಲಾಂಟ್ ಮಾಡ್ಸಿದ್ದು ಅದಕ್ಕಾಗಿ 7ಲಕ್ಷ ಖರ್ಚು ಮಾಡಿದ್ದೇನೆ ಎಂದು ಹೇಳಿದ್ದಾರೆ.