ಗಂಡು-ಹೆಣ್ಣು ಮದ್ವೆ ಆಗೋದು ಕಾಮನ್. ಗಂಡು-ಗಂಡು, ಹೆಣ್ಣು -ಹೆಣ್ಣನ್ನು ಮದ್ವೆ ಆಗೋದು ಈಗೀಗ ಸರ್ವೇಸಾಮಾನ್ಯ. ಇನ್ನು ಬೇರೆ ಬೇರೆ ಪ್ರಾಣಿಗಳನ್ನು ಮದ್ವೆ ಆಗೋ ಮಂದಿಯನ್ನೂ ನೀವು ನೋಡಿದ್ದೀರಿ. ಆದ್ರೆ ತನ್ನನ್ನೂ ತಾನೇ ಮದ್ವೆ ಆದವರ ಬಗ್ಗೆ ಕೇಳಿದ್ದೀರ? ನೋಡಿದ್ದೀರ?
ಲಂಡನಿನ್ನಲ್ಲಿ ಉಗಾಂಡ ಮೂಲದ ಆಕ್ಸ್ ಫರ್ಡ್ ವಿವಿಯ ವಿದ್ಯಾರ್ಥಿನಿ ಲುಲು ಜಮೀಮಾ ಎಂಬಾಕೆ ತನ್ನ 32ನೇ ವಯಸ್ಸಿನ ಪ್ರಯುಕ್ತ ತನ್ನನ್ನೇ ತಾನು ವರಿಸಿದ್ದಾಳೆ. ಚರ್ಚಿನಲ್ಲಿ ಸಾಂಪ್ರದಾಯಿಕ ವಿವಾಹ ಧರಿಸಿನಲ್ಲಿ ಆಗಮಿಸಿದ ಈಕೆ ಮದುವೆಗೆ ಆಗಮಿಸಿದ ಅತಿಥಿಗಳಿಗೆ ವರನಿಲ್ಲದೆ ನನ್ನನ್ನೇ ನಾನು ಮದುವೆಯಾಗಿರುವುದಾಗಿ ಘೋಷಿಸಿಕೊಂಡಳು.
ಲುಲು 16ನೇ ವರ್ಷಕ್ಕೆ ಕಾಲಿಟ್ಟಾಗ ಈಕೆಯ ತಂದೆ ಮದುವೆಯ ಓಲೆಯನ್ನು ಬರೆದುಕೊಟ್ಟಿದ್ದರಂತೆ. ಪ್ರತಿ ಹುಟ್ಟು ಹಬ್ಬದ ವರ್ಷಾಚರಣೆಯಲ್ಲಿ ಒಳ್ಳೆಯ ಪತಿ ಸಿಕ್ಕಿ ಉತ್ತಮ ಜೀವನ ಕಂಡುಕೊಳ್ಳಲಿ ಎಂದು ಈಕೆಯ ತಾಯಿ ದೇವರಲ್ಲಿ ಬೇಡಿಕೊಳ್ಳುತ್ತಿದ್ದರಂತೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಲುಲು ತನ್ನ ಜೀವನವನ್ನು ಸ್ವತಃ ತಾನೇ ನೋಡಿಕೊಳ್ಳುವ ಸಲುವಾಗಿ ವರನಿಲ್ಲದೆ ಮದುವೆಯಾಗಿದ್ದಾಳೆ. ಮದುವೆಗೆ ಪೋಷಕರು ಹಾಜರಾಗಿರಲಿಲ್ಲ.
ಈಕೆಯ ಮದುವೆಗೆ ತಗುಲಿದ್ದು ಕೇವಲ ಎರಡೂವರೆ ಡಾಲರ್, ಅದೂ ಮನೆಯಿಂದ ಚರ್ಚಿಗೆ ತೆರಳಲು ವಾಹನದ ಬಾಡಿಗೆ. ಮದುವೆಗಂತ ಫ್ರೆಂಡ್ ನಿಂದ ಗೌನನ್ನು ಪಡೆದುಕೊಂಡಿದ್ದಳು. ಸಹೋದರ ತನ್ನ ಖರ್ಚಿನಲ್ಲಿ ಸಮಾರಂಭಕ್ಕೆ ಆಗಮಿಸಿದ್ದ ಅತಿಥಿಗಳಿಗೆ ಕೇಕನ್ನು ತಂದುಕೊಟ್ಟಿದ್ದ ಎಂದು ವರದಿಯಾಗಿದೆ.