ಬೆಂಗಳೂರಿನ ಶಿವಾಜಿನಗರದ ಬಬೂ ಬಂಜಾರ್ ನಲ್ಲಿದ್ದ ರಾಜ್ಯದ ಏಕೈಕ ಐಟಿಐ ಕಾಲೇಜು ಈಗ ಬಂದ್ ಆಗಲಿದೆ.
ವಿದ್ಯಾರ್ಥಿಗಳಿಗೆ, ಪೋಷಕರಿಗೆ ಹೇಳದೆ ಆಡಳಿತ ಮಂಡಳಿ ತೆಗೆದುಕೊಂಡಿರುವ ಈ ನಿರ್ಧಾರದಿಂದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.
ಕಿವುಡರ ತಾಂತ್ರಿಕ ಕೇಂದ್ರ ಕಳೆದ 36 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ರಾಜ್ಯದ ಏಕೈಕ ಕಿವುಡರ ತಾಂತ್ರಿಕ ಕೇಂದ್ರ ಎಂಬ ಹೆಗ್ಗಳಿಕೆಯೂ ಇದೆ. ಸದ್ಯ ರಾಜ್ಯದ ವಿವಿಧ ಭಾಗ ಹಾಗೂ ಜಿಲ್ಲೆಯ 65 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಮೆಟ್ರೋ ನೆಪವೊಡ್ಡಿ ಆಡಳಿತ ಮಂಡಳಿ ತರಬೇತಿ ಕೇಂದ್ರವನ್ನು ಬಂದ್ ಮಾಡಲು ಹೊರಟಿರೋದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.