ವಿಶ್ವದ ಮೊಬೈಲ್ ಮಾರುಕಟ್ಟೆಯ ಬಗ್ಗೆ ಅಧ್ಯಯನ ನಡೆಸುವ ಕೌಂಟರ್ ಪಾಯಿಂಟ್ ಪ್ರಕಾರ 2017-18ನೇ ಸಾಲಿನ ಆರ್ಥಿಕ ವರ್ಷದಲ್ಲಿ ಭಾರತೀಯರು ಚೀನಾ ಕಂಪನಿಯ ಸ್ಮಾರ್ಟ್ ಫೋನ್ಗಳಿಗೆ ಬರೋಬ್ಬರಿ 51 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ಕ್ಸಿಯೋಮಿ ಟೆಕ್ನಾಲಜಿಯು 22,947.3 ಕೋಟಿ ರೂ. ವಹಿವಾಟು ನಡೆಸುವ ಮೂಲಕ ಪ್ರಥಮ ಸ್ಥಾನಗಳಿಸಿದ್ದರೆ, ಎರಡನೇ ಸ್ಥಾನದಲ್ಲಿ ಒಪ್ಪೋ ಕಂಪನಿಯು 11,994.3 ಕೋಟಿ ರೂ. ವಹಿವಾಟು ನಡೆಸಿದೆ. ಇದಲ್ಲದೇ ವಿವೋ 11,179.3 ಕೋಟಿ ರೂ. ವ್ಯಾಪಾರ ನಡೆಸಿದರೆ, ಹುವಾವೇ 5,601.3 ಕೋಟಿ ರೂ. ವಹಿವಾಟು ನಡೆಸಿದೆ.
ದಕ್ಷಿಣ ಕೊರಿಯಾದ ಸ್ಯಾಮಸಂಗ್ 2016-17ರ ಸಾಲಿನಲ್ಲಿ 34,261 ಕೋಟಿ ರೂ. ಹಾಗೂ ಲೆನೆವೊ ಮೊಟೊರೊಲಾ 11,950 ಕೋಟಿ ರೂ. ವಹಿವಾಟನ್ನು ಭಾರತದಲ್ಲಿ ನಡೆಸಿತ್ತು. 2018ನೇ ಆರ್ಥಿಕ ಸಾಲಿನಲ್ಲಿ ಆ್ಯಪಲ್ 13,097 ಕೋಟಿ ರೂ. ವಹಿವಾಟನ್ನು ಭಾರತದ ಮಾರುಕಟ್ಟೆಯಲ್ಲಿ ನಡೆಸಿದೆ. ಆದರೆ 2018ರ ಆರ್ಥಿಕ ಸಾಲಿನ ಸ್ಯಾಮ್ಸಂಗ್ ಹಾಗೂ ಲೆನೆವೊ ಕಂಪನಿಗಳ ಮಾಹಿತಿಗಳು ಲಭ್ಯವಿಲ್ಲ.