ಲವ್ ಬ್ರೇಕಪ್ ಮಾಡಿಕೊಂಡ ವ್ಯಕ್ತಿ ನಾಯಿಯೊಂದನ್ನು ಜೀವಂತ ಹೂಳಿದ ಘಟನೆ ಅಮೆರಿಕದ ಮ್ಯಾಸ್ಚೂಸೆಟ್ಸ್ನಲ್ಲಿ ಇತ್ತೀಚೆಗೆ ನಡೆದಿದೆ. ಈ ಅಮಾನವೀಯ ಕೃತ್ಯವನ್ನು ನಡೆಸಿರುವುದು ರಿಚರ್ಡ್ ಪೀಕ್ವಾರ್ಡ್ ಎನ್ನುವ 24 ವರ್ಷದ ವ್ಯಕ್ತಿ.
ಈತ ತನ್ನ ಗೆಳತಿಯೊಂದಿಗೆ ಜಗಳ ಆಡಿಕೊಂಡಿದ್ದ.ಇದರಿಂದ ಅವಳೂ ಇವನನ್ನು ಬಿಟ್ಟು ದೂರ ಆದಳು. ಲವ್ ಬ್ರೇಕಪ್ ಆಗಿದ್ದರಿಂದ ಅವಳು ಪ್ರೀತಿಯಿಂದ ಉಡುಗೊರೆ ರೂಪದಲ್ಲಿ ಕೊಟ್ಟಿದ್ದ ನಾಯಿಯನ್ನು ಜೀವಂತ ಹೂಳಿ ದ್ದಾನೆ.
ನಿನ್ನ ನಾಯಿ ಸತ್ತೊಯ್ತು ಅಂತ ಲವ್ವರ್ ಗೆ ಮೆಸೇಜ್ ಮಾಡಿದ್ದ. ಆದರೆ, ಅನುಮಾನದಿಂದ ಆಕೆ ಕಂಪ್ಲೇಂಟ್ ಕೊಟ್ಟಿದ್ದಳು. ವಿಚಾರಣೆ ಬಳಿಕ ಸತ್ಯ ಹೊರ ಬಂದಿದೆ.