ರಾಕಿಂಗ್ ಸ್ಟಾರ್ ಯಶ್ ಸ್ನೇಹಿತರ ಜೊತೆ ಶಿರಡಿ ಬಾಬಾನ ದರ್ಶನ್ ಪಡೆದಿದ್ದಾರೆ. ನಂತರ ಅಲ್ಲಿಂದ ಕೊಲ್ಲಾಪುರದ ಮಹಾಲಕ್ಷ್ಮಿ ದೇವಿಯ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದ್ದಾರೆ.
ಸಾಮಾನ್ಯನಂತೆ ಯಶ್ ದೇವಸ್ಥಾನಗಳಿಗೆ ಭೇಟಿ ನೀಡಿದ್ದು ವಿಶೇಷವಾಗಿತ್ತು. ಯಶ್ ಆಗಮನದ ಸುದ್ದಿ ತಿಳಿದ ಮೇಲೆ ಅಲ್ಲಿನ ಮಾಧ್ಯಮಗಳು ಆಗಮಿಸಿ ಒಂದಷ್ಟು ಫೋಟೋ ಕ್ಲಿಕ್ಕಿಸಿಕೊಂಡಿದ್ದು ಬಿಟ್ಟರೆ ಇನ್ಯಾರಿಗೂ ಯಶ್ ದೇವಸ್ಥಾನಗಳಿಗೆ ಭೇಟಿ ನೀಡುವುದು ಗೊತ್ತಿರಲಿಲ್ಲ.
ಯಶ್ ಬಹಳ ವರ್ಷಗಳಿಂದ ಈ ದೇವಸ್ಥಾನಗಳಿಗೆ ಹೋಗಬೇಕೆಂದುಕೊಂಡಿದ್ದರಂತೆ . ಆದರೆ ಸಾಧ್ಯವಾಗಿರಲಿಲ್ಲವಂತೆ.
ಇನ್ನು ಯಶ್ ಅಭಿನಯದ ಕೆಜಿಎಫ್ ಚಿತ್ರ ಬಿಡುಗಡೆಗೆ ರೆಡಿಯಾಗಿದ್ದು ಅಭಿಮಾನಿಗಳು ಕಾಯ್ತಾ ಇದ್ದಾರೆ.