ಮನಸ್ಸಿದ್ದರೆ ಮಾರ್ಗ ……ಕೆಲಸ ಮಾಡಲಾಗಲಿ ಅಥವಾ ಯಾವುದೇ ಸಾಧನೆಗೆ ಆಗಲಿ ವಯಸ್ಸು ಎನ್ನುವುದು ಅಡ್ಡಿ ಬರುವುದಿಲ್ಲ. ಇದಕ್ಕೆ ಕ್ಯಾಲಿ ಟೆರೆಲ್ ಉದಾಹರಣೆ ಆಗುತ್ತಾರೆ.
ಕ್ಯಾಲಿ ಟೆರೆಲ್ ಯುಎಸ್ ನ ಮೆಂಫೆಸ್ ನ ಬ್ಯೂಟಿಷನ್ . ಇವರಿಗೆ 99 ವರ್ಷ.ಇವರು ವಿಶ್ವದ ಹಿರಿಯ ಬ್ಯೂಟಿಷನ್.
1945ರ ಜನವರಿ 30 ರಂದು ಕ್ಯಾಲಿ ಅವರು ಪರವಾನಗಿ ತೆಗೆದುಕೊಂಡು ಬ್ಯೂಟಿ ಪಾರ್ಲರ್ ಶುರುಮಾಡಿದ್ರು. ಅಂದಿನಿಂದ ವೃತ್ತಿ ಶುರುಮಾಡಿದ ಇವರು ಇಂದಿಗೂ ನಿವೃತ್ತರಾಗಿಲ್ಲ.
ನವೆಂಬರ್ 26 ರಂದು 100ನೇ ವರ್ಷಕ್ಕೆ ಕಾಲಿಡುತ್ತಿದ್ದು , ಈ ದಿನ ನಿವೃತ್ತಿ ಘೋಷಿಸುವುದಾಗಿ ಹೇಳಿದ್ದಾರೆ.
ಇವರ ಮಗಳು ಇನೆಜ್ ಕೆಲಕಾಲ ಮಾತ್ರ ಇವರಿಗೆ ಸಹಾಯಕಿಯಾಗಿ ಕೆಲಸ ಮಾಡಿದ್ದರು. ಆದ್ರೆ ಅವ್ರು ಹೆಚ್ಚು ಕೆಲಸ ಮುಂದುವರೆಸಿಲ್ಲ.ಅಜ್ಜಿ ತನಗೆ ಇಷ್ಟವಾದ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ . ಇಳಿವಯಸ್ಸಿನಲ್ಲೂ ಕೆಲಸದಲ್ಲಿ ಆಸಕ್ತಿಯಿಂದ ಕೆಲಸ ಮಾಡುವ ಕ್ಯಾಲಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.