ಹಣ ದುಪಟ್ಟು ಮಾಡಿಕೊಡ್ತೀನಿ ಎಂದು ನಂಬಿಸಿ ಲಕ್ಷ ಲಕ್ಷ ವಂಚನೆ ಮಾಡಿದ ಆರೋಪದ ಮೇಲೆ ಪೊಲೀಸ್ ಅಧಿಕಾರಿಯೇ ಜೈಲು ಸೇರಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿಎಸ್ ಪಿ ನಾಗೇಂದ್ರ ಕುಮಾರ್ ಬಂಧಿತ ಪೊಲೀಸ್.
ಇವರ ಜೊತೆ ಕಾನ್ಸ್ ಟೇಬಲ್ ಗಳಾದ ವೆಂಕಟರಮಣ ಮತ್ತು ಸಂತೋಷ್ ಕೂಡ ಅರೆಸ್ಟ್ ಆಗಿದ್ದಾರೆ.
ರಾಮಮೂರ್ತಿ ನಗರದ ಶಿವಕುಮಾರ್ ಅವರು ನೀಡಿರುವ ವಂಚನೆ ದೂರಿನ ಮೇರೆಗೆ ಈ ಪೊಲೀಸರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.