ಪ್ಯಾರೀಸ್: ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಫ್ರಾನ್ಸ್ ಪೀಸ್ ಫೋರಮ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಮಹಿಳೆ ಟಾಪ್‍ಲೆಸ್ ಆಗಮಿಸಿ ಪ್ರತಿಭಟಿಸಿದ್ದಾರೆ.
ಕಾರ್ಯಕ್ರಮದ ನಂತರ ಕಾರಿನಲ್ಲಿ ತೆರಳುತ್ತಿದ್ದ ಟ್ರಂಪ್ ಅವರ ಕಾರು ಆಗಮಿಸುತ್ತಿದಂತೆ ಭದ್ರತಾ ಸಿಬ್ಬಂದಿ ಕಣ್ಣುತಪ್ಪಿಸಿದ ಯುವತಿ ತನ್ನ ದೇಹದ ಮೇಲೆ ಟ್ರಂಪ್ ವಿರೋಧಿ ಘೋಷಣೆಗಳನ್ನು ಬರೆದುಕೊಂಡು ಬಂದು ಘೋಷಣೆ ಕೂಗಿ ಪ್ರತಿಭಟನೆ ಮಾಡಿದ್ದಾರೆ.
ಟ್ರಂಪ್ ನಕಲಿ ಶಾಂತಿಧೂತ ಎಂದು ಪ್ರತಿಭಟನಾಗಾರ್ತಿ ಘೋಷಣೆ ಕೂಗಿದ್ದಾಳೆ. ಆಕೆ ಪ್ಯಾರಿಸ್ ಮಹಿಳಾ ಸಂಘಟನೆಯ ಕಾರ್ಯಕರ್ತೆ ಎಂದು ವರದಿಯಾಗಿದೆ.
ಮೊದಲೇ ವಿಶ್ವಯುದ್ಧ ಕೊನೆಗೊಂಡು 100 ವರ್ಷವಾದ ಹಿನ್ನೆಲೆಯಲ್ಲಿ ಪ್ಯಾರೀಸ್ ನಗರದಲ್ಲಿ ಪೀಸ್ ಫೋರ್ಮ್ 2018 ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಈ ಕಾರ್ಯಕ್ರಮದಲ್ಲಿ ವಿಶ್ವದ 70 ಪ್ರಮುಖ ದೇಶಗಳ ಪಾಲ್ಗೊಂಡಿದ್ದರು.
ಭಾರತವನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಪ್ರತಿನಿಧಿಸಿದ್ದರು.