ಸಖತ್ ಸೌಂಡ್ ಮಾಡ್ತಿರುವ ಕೆಜಿಎಫ್ ಸಿನಿಮಾನ ರಾಧಿಕ ಪಂಡಿತ್ ಇನ್ನು ನೋಡಿಲ್ವಂತೆ.. ಈ ಬಗ್ಗೆ ಯಶ್ ಹೇಳಿದ್ದು ಹೀಗೆ..!!
ಈಗಾಗ್ಲೇ 150 ಕೋಟಿಯ ಹತ್ತಿರ ತಲುಪಿರುವ ಕನ್ನಡದ ಹೆಮ್ಮೆ ಸಿನಿಮಾ ಕೆಜಿಎಫ್ ಗೆ ದಿನ ಕಳೆದ ಹಾಗೆ ಪ್ರೇಕ್ಷಕರ ಸಂಖ್ಯೆ ಅಧಿಕವಾಗುತ್ತಿದೆ.. ಇದಕ್ಕೆ ಕಾರಣ ಸಿನಿಮಾದ ಬಗ್ಗೆ ಎಲ್ಲೆಡೆ ಕೇಳಿ ಬರುತ್ತಿರುವ ಪಾಸಿಟಿವ್ ಮಾತುಗಳು..ವಿಶ್ವದಾದ್ಯಂತ ಕೆಜಿಎಫ್ ಚಿತ್ರವನ್ನ ಎಲ್ಲರು ನೋಡಿ ಕಣ್ತುಂಬಿಕೊಳ್ಳುತ್ತಿದ್ರೆ, ಇತ್ತ ಯಶ್ ಅವರ ಮಡದಿ ರಾಧಿಕ ಪಂಡಿತ್ ಇನ್ನು ಕೆಜಿಎಫ್ ಚಿತ್ರವನ್ನೆ ನೋಡಿಲ್ವಂತೆ..
ಯಾಕೆ ಅಂತ ಯಶ್ ಅವರನ್ನ ಪ್ರಶ್ನೆ ಮಾಡಿದ್ರೆ ಅವರು ಹೇಳಿದ್ದು ಹೀಗೆ.. ಸದ್ಯ ಚೊಚ್ಚಲ ಮಗುವಿನ ಸಂಭ್ರಮದಲ್ಲಿರುವ ಇಡೀ ಕುಟುಂಬ ಮಗುವಿನ ಲಾಲನೆ ಪಾಲನೆಯಲ್ಲಿ ಬ್ಯೂಸಿಯಾಗಿದೆ.. ಅದರಲ್ಲು ವೈದರ ಸಲಹೆ ಮೇರೆಗೆ ರಾಧಿಕಾ ಪಂಡಿತ್ ವಿಶ್ರಾಂತಿಯನ್ನ ಪಡೆಯುತ್ತಿದ್ದು ಸಿನಿಮಾ ನೋಡಲು ಸಾಧ್ಯವಾಗಿಲ್ಲ ಎಂದಿದ್ದಾರೆ.. ಆದಷ್ಟು ಬೇಗ ಪತ್ನಿಗೆ ಸಿನಿಮಾ ನೋಡುವ ವ್ಯವಸ್ಥೆ ಮಾಡಲಾಗುತ್ತೆ ಎಂದಿದ್ದಾರೆ…