22ರ ಹುಡುಗಿ 2000ಕ್ಕೂ ಹೆಚ್ಚಿನ ಹಾವನ್ನು ಹಿಡಿದಿದ್ದಾಳೆ..! ಶಹಬ್ಬಾಶ್..! ಗಾರ್ಗಿ ವಿಜಯರಾಘವನ್

Date:

ಅಯ್ಯೋ..ಅಯ್ಯೋಯ್ಯೋ ಅಮ್ಮಾ..ಜಿರಲೇ.., ಹೇ…ಹೇ ಅಲ್ಲಿ..ಪಲ್ಲಿ…! ಹಿಂಗಂತ ಜಿರಲೆ, ಪಲ್ಲಿಗಳನ್ನು ಕಂಡರೆ ಕಿರುಚಿ, ಮನೆಮಂದಿಯನ್ನೆಲ್ಲಾ ಗಾಬರಿಗೊಳ್ಳುವಂತೆ ಮಾಡ್ತಾರೆ, ಹುಡುಗಿಯರು..! ಆದ್ರೆ ಗಾರ್ಗಿ ಮಾತ್ರ ಹಂಗಲ್ಲ..! ಗಾರ್ಗಿನಾ? ಯಾವ್ ಗಾರ್ಗಿ ಗುರೂ? ಅದೇ ಸಾರ್ `ಹಾವು ಹಿಡಿಯುವ ಗಾರ್ಗಿ’..! ಓಹ್, ನಿಮಗೆ ಈ ಗಾರ್ಗಿ ಬಗ್ಗೆ ಗೊತ್ತಿಲ್ವಲ್ಲಾ? ಸರಿ, ಹಾಗಾದ್ರೆ ಮುಂದಕ್ಕೆ ಓದಿ.
`ಗಾರ್ಗಿ ವಿಜಯರಾಘವನ್’. ಮುಂಬೈನ ಬಾರ್ಕ್ ಕಾಲೋನಿಯ 22ರ ತರುಣಿ. ಇವರು ಪರಿಸರ ವಿಜ್ಞಾನ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಪರಿಸರದ ಸಮತೋಲನ ಕಾಪಾಡುವಲ್ಲಿ ಹಾವುಗಳು ಬಹು ಮುಖ್ಯ ಪಾತ್ರವಹಿಸುತ್ತವೆ. ಆದ್ರೆ ಜನ ಹಾವು ಕಂಡರೆ ನಮಗೇನು ಮಾಡುತ್ತದೋ ಅನ್ನೋ ಭಯದಿಂದ ಅದನ್ನು ಹೊಡೆದು ಸಾಯಿಸ್ತಾರೆ..! ಹಾವುಗಳನ್ನು ಕೊಲ್ತಾ ಹೋದ್ರೆ ಖಂಡಿತ ಪರಿಸರದ ಸಮತೋಲನ ತಪ್ಪೇ ತಪ್ಪುತ್ತೆ..! ಆದ್ರಿಂದ ಹಾವನ್ನು ಕೊಲ್ಲಬೇಡಿ ಅಂತ ಕಿವಿ ಮಾತು ಹೇಳ್ತಾರೆ ಈ ಗಾರ್ಗಿ..! ಅಷ್ಟೇ ಅಲ್ಲ, ಅವರೂ ಕೂಡ ವನ್ಯ ಜೀವಿಗಳ ರಕ್ಷಣೆಯನ್ನು ಅದರಲ್ಲಿಯೂ ಮುಖ್ಯವಾಗಿ ಹಾವುಗಳ ರಕ್ಷಣೆಯನ್ನು ಮಾಡ್ತಾ ಬಂದಿದ್ದಾರೆ..! ಅಪ್ಪ ವಿಜಯ್ ರಾಘವನ್ರಿಂದ ಹಾವು ಹಿಡಿಯುವ ಕಲೆಯನ್ನು ಸಿದ್ದಿಸಿಕೊಂಡಿದ್ದಾರೆ ಈ ಗಾರ್ಗಿ..! ಇವರೇನು ನಿನ್ನೆ ಮೊನ್ನೆಯಿಂದ ಹಾವು ಹಿಡಿಯುತ್ತಿಲ್ಲ..! ತನ್ನ 13 ನೇ ವಯಸ್ಸಿನಿಂದಲೇ ಹಾವು ಹಿಡಿಯುತ್ತಿದ್ದಾರೆ..! ಗಾರ್ಗಿ ಊರಲ್ಲಿ,ಅಕ್ಕ-ಪಕ್ಕದ ಊರಲ್ಲಿ ಎಲ್ಲೇ ಆದ್ರೂ, ಯಾರ ಮನೆಯಲ್ಲಾದ್ರೂ ಹಾವು ಕಾಣಿಸಿಕೊಂಡರೆ ಗಾರ್ಗಿಗೆ ಫೋನ್ ಬರುತ್ತೆ..! ತಕ್ಷಣ, ಅಲ್ಲಿಗೆ ಹೋಗಿ ಹಾವು ಹಿಡಿದು ಅರಣ್ಯಕ್ಕೆ ಬಿಟ್ಟು ಬರ್ತಾರೆ..!
ಏನೇಹಾಗಲಿ, ಗಾರ್ಗಿ ವನ್ಯಜೀವಿಗಳ ರಕ್ಷಣೆಗೆ ಶ್ರಮಿಸ್ತಾ ಇರೋದನ್ನು ಹೇಗಿದ್ರೂ ಮೆಚ್ಚಲೇ ಬೇಕು..! ಇಲ್ಲಿಯವರೆಗೆ 2000ಕ್ಕೂ ಹೆಚ್ಚು ಹಾವುಗಳನ್ನು ಹಿಡಿಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ, ಅಂತೆಯೇ ಇಂಥಾ ಕೆಲಸದಿಂದ ದೈರ್ಯ ಹೆಚ್ಚುತ್ತೆ ಎಂದು ಯುವತಿಯರಿಗೆ ತಿಳಿ ಹೇಳಿದ್ದಾರೆ..! ಇವರನ್ನು ನೋಡಿ, ಹುಡುಗಿಯರು ದೈರ್ಯ ಮೈಗೂಡಿಸಿಕೊಂಡರೆ ಎಂಥಾ ಸಂದರ್ಭವನ್ನೂ ಎದುರಿಸಿ ಬಚಾವ್ ಆಗಬಲ್ಲರು..! ಅಲ್ವಾ

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...