ಭಾರತ ಕ್ರಿಕೆಟಿಗರು ವಿಶ್ವ ಕ್ರಿಕೆಟ್ನಲ್ಲಿ ಸದ್ದು ಮಾಡಿದ್ದಾರೆ ,ಇವತ್ತೂ ಸದ್ದು ಮಾಡುತ್ತಲೇ ಇದ್ದಾರೆ..! ಅದ್ಭುತ ಕ್ರಿಕೆಟ್ ಗರು ಭಾರತದಲ್ಲಿದ್ದಾರೆ..! ಎಂಥೆಂಥಾ ಆಲ್ರೌಂಡರ್ಗಳಿದ್ದಾರಂತಲೂ ಗೊತ್ತು..! ಅದ್ಭುತ ಎಡಗೈ-ಬಲಗೈ ಸ್ಪಿನ್ನರ್ ಗಳನ್ನು ದೇಶ ಕಂಡಿದೆ, ಇವತ್ತಿಗೂ ಅದ್ಭತ, ಪ್ರತಿಭಾವಂತ ಬೌಲರ್ ಗಳು ನಮ್ಮಲ್ಲಿ ಉದಯಿಸ್ತಾ ಇದ್ದಾರೆ..! ಅಂಥಾ ಪ್ರತಿಭಾವಂತ ಬೌಲರ್ಗಳಲ್ಲಿ ಎರಡೂ ಕೈನಲ್ಲಿ ಬೌಲ್ ಮಾಡುವ ಪ್ರತಿಭೆಗಳನ್ನು ನೀವು ಗುರುತಿಸಿದ್ದೀರಾ? ಎಡಗೈ-ಬಲಗೈ ಎರಡೂ ಕೈಯಲ್ಲೂ ಬೌಲ್ ಮಾಡಬಲ್ಲ ಆಲ್ರೌಂಡರ್ ಒಬ್ಬರು ಭಾರತದಲ್ಲಿದ್ದಾರೆ..! ಇವರ ಬಗ್ಗೆ ಎಷ್ಟೋ ಜನಕ್ಕೆ ಗೊತ್ತಿಲ್ಲ..! ಅವರೇ `ಅಕ್ಷಯ್ ಕರ್ನೇವರ್’..!
ಹ್ಞಾಂ ಸದ್ಯ ವಿದರ್ಭ ಕ್ರಿಕೆಟ್ ತಂಡದಲ್ಲಿರೋ ಅಕ್ಷಯ್ ಕರ್ನೇವರ್ ಎಡ ಮತ್ತು ಬಲಗೈಗಳೆರಡರಲ್ಲೂ ಅತ್ಯದ್ಬುತವಾಗಿ ಸ್ಪಿನ್ ಮೋಡಿ ಮಾಡ್ತಾರೆ..! ಮಹಾರಾಷ್ಟ್ರದ ಯವಂತಮಲ್ ಜಿಲ್ಲೆಯ ಪಂದರ್ಕಾವ್ಡ ಎಂಬ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಭಾರತದ ಮೊದಲ ಎಡ-ಬಲಗೈ ಬೌಲರ್..!
ಅಕ್ಷಯ್ 13ನೇ ವರ್ಷದವರಿರುವಾಗ ಕ್ರಿಕೆಟ್ ಆಡೋಕೆ ಶುರು ಮಾಡ್ತಾರಂತೆ..! ಕ್ರಿಕೆಟ್ ಆಡಲಾರಂಭಿಸಿದಾಗ ಅಕ್ಷಯ್ ಎಡಗೈ ಬ್ಯಾಟ್ಸಮನ್, ಬಲಗೈ ಆಫ್ ಸ್ಪಿನ್ನರ್ ಆಗಿದ್ರಂತೆ..! ಫೀಲ್ಡಿಂಗ್ ಮಾಡುವಾಗ ಚೆಂಡನ್ನು ಎರಡೂ ಕೈಗಳಿಂದ ಎಸೆಯುತ್ತಿದ್ದರಂತೆ..! ಇದನ್ನು ಗಮನಿಸಿದ ಕೋಚ್ ಬಾಲು ನಾವ್ಘಾರ್ ನೀನು ಎಡಗೈಲೂ ಬೌಲಿಂಗ್ ಮಾಡು ಅಂತ ಹೇಳ್ತಾರೆ…! ಅವತ್ತಿನಿಂದ ಅಕ್ಷಯ್ ಎಡ ಮತ್ತು ಬಲಗೈ ಎರಡರಲ್ಲೂ ಬೌಲಿಂಗ್ ಮಾಡ್ತಾ ಬಂದಿದ್ದಾರೆ..! ಇವರು 2009-10ರಲ್ಲಿ ಕೂಚ್ ಬಿಹಾರ್ ಟ್ರೋಫಿಯಲ್ಲಿ 18 ವಿಕೆಟ್ ಪಡೆದು ವಿದರ್ಭ ತಂಡ ಸೆಮಿಫೈನಲ್ ಪ್ರವೇಶಿಲು ಕಾರಣರಾಗಿದ್ದರು..! ಈ 18 ವಿಕೆಟ್ ಗಳಲ್ಲಿ 10 ವಿಕೆಟ್ಗಳನ್ನು ಎಡಗೈ ಬೌಲಿಂಗ್ನಿಂದಲೂ, 8 ವಿಕೆಟ್ಗಳನ್ನು ಬಲಗೈ ಬೌಲಿಂಗ್ ನಿಂದಲೂ ಪಡೆದಿದ್ದರು..! ಇವರು ಬೌಲಿಂಗ್ ಮಾಡುತ್ತಿರುವಾಗ ಎದುರಾಳಿ ತಂಡದವರು ಎಡಗೈ ಸ್ಪಿನ್ನರ್ ಅಂತ ಎಡಗೈ ಬ್ಯಾಟ್ಸಮನ್ ಅನ್ನು ಕಳಿಸಿದರೆ ಅಕ್ಷಯ್ ಬಲಗೈನಲ್ಲಿ ಬೌಲಿಂಗ್ ಮಾಡಿ ಎಲ್ಲರನ್ನೂ ತಬ್ಬಿಬ್ಬು ಮಾಡ್ತಾರೆ..! ಅದೇ ಬಲಗೈ ಬೌಲರ್ ಅಂತ ತಿಳಿದು ಬಲಗೈ ಬ್ಯಾಟ್ಸಮನ್ ಗಳನ್ನು ಕ್ರೀಸ್ ಗೆ ಇಳಿಸೋದೂ ಕಷ್ಟವೆ?! ಯಾಕಂದ್ರೆ ಅಕ್ಷಯ್ ಕರ್ನೇವರ್, ಸಂದರ್ಭ, ಸನ್ನಿವೇಶ, ಬ್ಯಾಟ್ಸಮನ್ ನೋಡಿ ಕೈ ಚಳಕ ತೋರಿಸ್ತಾರೆ..! ಇವರು ಆದಷ್ಟು ಬೇಗ ಟೀಂ ಇಂಡಿಯಾಕ್ಕೆ ಬರುವಂತಾಗಲೆಂದು ಹರಸೋಣ.
Video :
https://www.youtube.com/watch?v=0jZrK5lOsnk
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com