22ನೇ ವಯಸ್ಸಿಗೆ ಉದ್ಯಮಿಯಾದ ಸುಪ್ರೀಯಾ..! ಆರಂಭದಲ್ಲಿ ಕಂಪನಿ ಆದಾಯ 5000, ಇವತ್ತು 30,00,00,000 ರೂಪಾಯಿಗಳು..!

Date:

ಈಕೆ ಯುವಕ, ಯುವತಿಯರಿಗೆ ಮಾದರಿ..! ಇವಳ ಬಗ್ಗೆ ಓದಿದ್ರೆ ಲೈಫ್ ನಲ್ಲಿ ನಾವೂ ಏನಾದರೊಂದನ್ನು ಸಾಧಿಸಬೇಕೆಂಬ ಛಲ ಖಂಡಿತಾ ಬರುತ್ತೆ..! ದುಡ್ಡಿದ್ದವರಾಗಲೀ, ದುಡ್ಡಿಲ್ಲದೇ ಇರೋರಾಗಲಿ, ಯಾರೇ ಆಗಲಿ ಅವರಿಗೆ ಇವಳು ನಿಜಕ್ಕೂ ಆದರ್ಶಳು..! ಸ್ಟೋರಿ ಚಿಕ್ಕದೇ.., ಆದರೆ ಇದನ್ನು ಓದಿದ್ರೆ ಎಲ್ಲೋ ಒಂದು ಕಡೆ, ಈಕೆ ಇಷ್ಟೊಂದು ಸಣ್ಣ ವಯಸ್ಸಲ್ಲಿ ಇಷ್ಟೊಂದು ಎತ್ತರಕ್ಕೆ ಬೆಳೆದಿದ್ದಾಳಲ್ಲಾ?! ನಾವೂ ಇವಳಂಥೆ ಆದರೆ ಎಷ್ಟು ಸೊಗಸಾಗಿರುತ್ತೆ ಎಂದೆನಿಸಯೇ ಅನಿಸುತ್ತೆ..!
ಅವರು ಸುಪ್ರೀಯಾ. ಫೈನ್ ಆರ್ಟ್ಸ್ ನಲ್ಲಿ ಪದವಿ ಪಡೆದಿದ್ದಾರೆ. ಇವರು ಪದವಿ ಪಡೆಯುತ್ತಿದ್ದಂತೆ ಎಲ್ಲಂತೆ ಕೆಲಸವನ್ನು ಹುಡುಕಿಕೊಂಡು ಹೋಗಲಿಲ್ಲ..! ತನ್ನೊಳಿಗನ ಕ್ರಿಯೇಟಿವ್ ಕಲ್ಪನೆಗಳಿಂದ ಹೊಸದೇನಾದರೊಂದನ್ನು ಮಾಡ್ಬೇಕು..! ನಾನು ಕೆಲಸಕ್ಕೆ ಹೋಗುವ ಬದಲು, ನಾನೇ ಕೆಲಸವನ್ನು ಕೊಡುವಂತವಳಾದರೆ ಹೇಗಿರುತ್ತೆ? ಅಂತ ಯೋಚಿಸೋಕೆ ಶುರು ಮಾಡ್ತಾರೆ..! ಹಾಗೇ ಯೋಚಿಸುವಾಗ ಸುಪ್ರೀಯಾಗಿನ್ನೂ 22 ವರ್ಷ ವಯಸ್ಸು..! ಆ ವಯಸ್ಸಲ್ಲಿ ಅನುಭವವಿಲ್ಲದೇ ಯಾರೂ ಅಂಥಹದೊಂದು ಸಾಹಸಕ್ಕೆ ಕೈ ಹಾಕಲ್ಲ..! ಕೆಲವರು ಅಂಥಾ ಸಾಹಸಕ್ಕೆ ಮುಂದಾಗ್ತಾರೆ..! ಅಂಥವರಲ್ಲಿ ಸುಪ್ರೀಯಾ ಅಗ್ರಪಂಕ್ತಿಯಲ್ಲಿ ನಿಲ್ತಾರೆ ಅನ್ನೋದು ನನ್ನ ಅನಿಸಿಕೆ..! ಸರಿ, ಹೀಗೆ ತಾನೇ ಒಂದಿಷ್ಟು ಜನರಿಗೆ ಉದ್ಯೋಗ ಕೊಡ್ಬೇಕಂತ ನಿರ್ಧರಿಸಿದ ಕೂಡಲೇ, ಪ್ಲಾನ್ ಮಾಡ್ತಾರೆ, ಏನ್ ಮಾಡ್ಬಹುದು? ಇವತ್ತಿನ ಮಾರ್ಕೆಟ್ ನಲ್ಲಿ ಯಾವುದಕ್ಕೆ ವ್ಯಾಲ್ಯೂ ಇದೆ..!? ಆ ಕ್ಷೇತ್ರದಲ್ಲಿ ನನ್ನ ಟ್ಯಾಲೆಂಟ್, ಕ್ರಿಯೇಟಿವಿಟಿಯ ಸಾಮಥ್ರ್ಯವನ್ನ ಅನಾವರಣ ಮಾಡೋಕಾಗುತ್ತಾ? ಹೀಗೆ ಎಲ್ಲಾ ರೀತಿಲೂ ಯೋಚನೆ ಮಾಡ್ತಾರೆ ಸುಪ್ರೀಯಾ..! ಒಂದು ದಿನ ತೀರ್ಮಾನ ತಗೊಂಡೆ ಬಿಡ್ತಾರೆ, ನೀರಿಗೆ ಬಿದ್ದರೆ ತಾನೇ ಈಜಲಿಕ್ಕೆ ಆಗೋದು..!? ಏನ್ ಆಗುತ್ತೋ ಆಗ್ಲಿ ಅಂತ ಕಂಪನಿಯನ್ನು ಕಟ್ಟೇ ಬಿಡ್ತಾರೆ..! ಅದು 2009, Masterstrokes advertising pvt. ltd. ಅನ್ನೋ ಕಂಪನಿಯನ್ನು ಹುಟ್ಟು ಹಾಕಿಯೇ ಬಿಡ್ತಾರೆ..! ಈ ಕಂಪನಿಯೊಂದಿಗೆ ಉದ್ಯಮಿಯಾಗಿ ಗುರುತಿಸಿಕೊಳ್ಳುವಾಗ ಸುಪ್ರೀಯಾ 22ರ ತರುಣಿ..!
ಅವತ್ತು ಹೀಗೊಂದು ಕಂಪನಿಯನ್ನು ಅಪ್ಪನಿಂದ 1ಕೋಟಿ ರೂಪಾಯಿ ಸಾಲ ಪಡೆದು ಕಟ್ಟಿದಾಗ.. `ಇವೆಲ್ಲಾ ಆಗುತ್ತೋ. ಹೋಗುತ್ತಾ.., ಎಂಥೆಂಥವರೆಲ್ಲಾ ಬ್ಯುಸ್ನೆಸ್ ಮಾಡಲಿಕ್ಕೋಗಿ ಕೈ ಸುಟ್ಟುಕೊಂಡಿದ್ದಾರೆ..?! ನೀನಿನ್ನೂ ಅನುಭವಿಲ್ಲದವಳು, ನಿನ್ನತ್ರ ಏನ್ ಆಗುತ್ತಂತ ಕೆಲವರು ಅಡ್ಡ ತಡೆದವರೂ ಇರಬಹುದು…!? ಇವರ ನಡೆ ನೋಡಿ, ನಕ್ಕವರೂ ಇರದೇ ಇರಲಿಕ್ಕಲ್ಲ…! ತಮ್ಮ ಕೈಯಲಿ ಆಗದೇ ಇರೋದನ್ನು ಬೇರೆಯವರೂ ಮಾಡ್ಬರ್ದು ಅನ್ನೋ ಮನಸ್ಥಿತಿಯವರು ಇರ್ತಾರೆ ನೋಡಿ..!? ಆರಂಭ ತಿಂಗಳಲ್ಲಿ ಕಂಪನಿ ಆದಾಯ ಕೇವಲ 5000 ರೂಪಾಯಿಗಳು ಮಾತ್ರ..! ಸುಪ್ರೀಯಾ ಅವತ್ತು ತಲೆ ಕೆಡಿಸಿಕೊಳ್ಳಲಿಲ್ಲ..! ಏನ್ ಆಗುತ್ತೋ ಆಗ್ಲಿ ಅಂತ ಗಟ್ಟಿ ಮನಸ್ಸು ಮಾಡಿ ಕಂಪನಿ ಶುರುಮಾಡಿದ್ರು..! 2014ರಲ್ಲಿ ಕಂಪನಿ ವ್ಯವಸ್ಥಿತವಾಗಿ ಕಾರ್ಯರಂಭ ಮಾಡೋಕೆ ಆರಂಭಿಸಿತು..! ನಂಬ್ತೀರೋ ಬಿಡ್ತೀರೋ ಇವತ್ತು ಸುಪ್ರೀಯಾರ ಕಂಪನಿಯ ಆದಾಯ ಬರೊಬ್ಬರಿ 30 ಕೋಟಿಗೂ ಮಿಗಿಲು…! 5000 ರೂಪಾಯಿಯಷ್ಟು ಆದಾಯದ ನೀಡ್ತಾ ಇದ್ದ ಕಂಪನಿ ಸಂಪಾದನೆ ಇವತ್ತು 30,00,00,000 ರೂಪಾಯಿಗಳೆಂದರೆ..ಲೆಕ್ಕಹಾಕಿ ಸುಪ್ರಿಯಾ ಚಿಕ್ಕವಯಸ್ಸಲ್ಲೇ ಎಂಥಾ ಎತ್ತರಕ್ಕೆ ಬೆಳೆದಿದ್ದಾರೆ..! ಹೇಗೆ ಕಷ್ಟಪಟ್ಟು ಯುವ ಉದ್ಯಮಿಯಾಗಿದ್ದಾರಂತ..!? ಈ ಕಂಪನಿಯನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ದು ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿಸಬೇಕೆಂಬ ಸುಪ್ರೀಯಾರು ಇನ್ನೂ ಎತ್ತರೆತ್ತರಕ್ಕೆ ಬೆಳೆಯಲಿ..! ನಮ್ಮ ದೇಶದ ಯುವ ಉದ್ಯಮಿ ಸುಪ್ರೀಯ ಯಶಸ್ಸಿನ ದಾರಿಯಲ್ಲಿ ಮುಂದವರೆಯಲಿ.

  • ಶಶಿಧರ ಡಿ ಎಸ್ ದೋಣಿಹಕ್ಲು

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

 

ಸಾವು ಗೆದ್ದು ಬಂದ ಕನ್ನಡದ ವೀರಯೋಧ..! 25 ಅಡಿ ಆಳದ ಹಿಮರಾಶಿಯಲ್ಲಿ ಜೀವಂತವಾಗಿ ಪತ್ತೆಯಾದ ಯೋಧ..! Video

ಎರಡೂ ಕೈಲಿ ಬೌಲಿಂಗ್ ಮಾಡುವ ಭಾರತದ ಸ್ಪಿನ್ನರ್..! ಇವರು ಎಡಗೈ ಮತ್ತು ಬಲಗೈಲೂ ಬೌಲ್ ಮಾಡ್ತಾರೆ..!

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...