ವಿಧಾನಸೌಧದಲ್ಲಿ ಸಿಕ್ಕ ಹಣಕದ ಪ್ರಕರಣಕ್ಕೆ ಹೊಸ ಟ್ವೀಸ್ಟ್..!
ಈ ಹಿಂದೆ ಅಂದ್ರೆ ಜನವರಿ 4 ರಂದು ವಿಧಾನಸೌಧದ ಆವರಣದಲ್ಲಿ ಮೋಹನ್ ಕುಮಾರ್ ಎಂಬುವರ ಬಳಿ 25.7 ಲಕ್ಷ ಹಣ ಪತ್ತೆಯಾಗಿತ್ತು.. ಈ ಮೋಹನ್ ಕುಮಾರ್ ಸಚಿವ ಪುಟ್ಟರಂಗ ಶೆಟ್ಟಿ ಅವರ ಕಚೇರಿಯಲ್ಲಿ ಕ್ವರ್ಕ್ ಆಗಿ ಕೆಲಸ ಮಾಡುತ್ತಿದ್ದಾತ.. ನಂತರ ಈ ಬಗ್ಗೆ ಮಾತನಾಡಿದ ಸಚಿವರು ಇದಕ್ಕು ನನಗು ಯಾವುದೇ ಸಂಬಂಧವಿಲ್ಲ.. ನಮ್ಮ ವಿರುದ್ಧ ಪಿತೂರಿ ಮಾಡಲಾಗಿದೆ ಎಂದೆಲ್ಲ ಹೇಳಿದ್ರು..
ಆದರೆ ಈಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವ ಬೆಳವಣಿಗೆ ನಡೆದಿದ್ದು, ಇಡೀ ಪ್ರಕರಣ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗ ಶೆಟ್ಟಿ ಕೊರಳಿಗೆ ಸುತ್ತಿಕೊಳ್ಳುತ್ತಿದೆ.. ಎಸಿಬಿ ಪೊಲೀಸರ ವಿಚಾರಣೆ ವೇಳೆ ಆ ಹಣ ಗುತ್ತಿಗೆದಾರರಾದ ನಂದ, ಅನಂತು, ಶ್ರೀನಿಧಿ ಹಾಗು ಕೃಷ್ಣಮೂರ್ತಿ ಅವರಿಗೆ ಸೇರಿದ್ದು ಅದನ್ನ ಅವರಿಗೆ ತಲುಪಿಸುವಂತೆ ನನ್ನ ಬಳಿ ನೀಡಿದ್ರು ಅಂತ ಬಂಧಿತ ಮೋಹನ್ ಕುಮಾರ್ ಹೇಳಿಕೆ ನೀಡಿದ್ದಾರೆ..
ಹೀಗಾಗೆ ಮುಂದಿನ ವಿಚಾರಣೆಗಾಗಿ ಎಸಿಬಿ ಅಧಿಕಾರಿಗಳು ಈ ಮೂರು ಗುತ್ತಿಗೆದಾರರಿಗು ನೋಟಿಸ್ ನೀಡಿದೆ.. ಇವರ ವಿಚಾರಣೆ ಬಳಿಕ ಸಚಿವರ ವಿಚಾರಣೆಯು ನಡೆಯುಸಲು ಎಸಿಬಿ ಮುಂದಾಗಿದ್ದು, ಇಡೀ ಪ್ರಕರಣ ಈ ಸಚಿವರ ಹೆಗಲ ಮೇಲೆ ಬೀಳಲ್ಲಿದ್ದು, ರಾಜೀನಾಮೆ ನೀಡುವಂತಾದ್ರು ಅಚ್ಚರಿ ಇಲ್ಲ…