ಬಾತ್ ರೂಂನಲ್ಲಿ ಜಾರಿ ಬಿದ್ದು ಬಲಗಾಲಿಗೆ ಪೆಟ್ಟು ಮಾಡಿಕೊಂಡ ಗೌಡರು..!!
ಮಾಜಿ ಪ್ರಧಾನಿಗಳಾದ 85 ವರ್ಷದ ದೇವೇಗೌಡರು ಇಂದು ಬೆಳಗ್ಗೆ ತಮ್ಮ ಪದ್ಮನಾಭನಗರ ನಿವಾಸದ ಬಾತ್ ರೂಂ ನಲ್ಲಿ ಜಾರಿ ಬಿದ್ದಿದ್ದಾರೆ.. ಬಿದ್ದ ಪರಿಣಾಮವಾಗಿ ಬಲಗಾಲಿಗೆ ಪೆಟ್ಟಾಗಿದೆ ಎಂಬ ವರದಿ ಲಭ್ಯವಾಗಿದೆ.. ಹೀಗಾಗೆ ಇವರಿಗೆ ನಡೆಯಲು ಕಷ್ಟವಾಗುತ್ತಿದೆ.. ಇಳಿಯವಸ್ಸಿನಲ್ಲಿ ಬಿದ್ದ ಪರಿಣಾಮವಾಗಿ ಬಲಗಾಲಿನ ಮಂಡಿಯ ಬಳಿ ಉಳುಕಿದೆ ಎಂದು ವೈದ್ಯರು ತಿಳಿಸಿದ್ದಾರೆ..
ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡ ಹೋಗಲಾಗುತ್ತಿದ್ದು, ಎಕ್ಸ್ ರೇ ಮಾಡಿಸಲು ಮುಂದಾಗಿದ್ದಾರೆ.. ಇನ್ನೂ ಈ ವಿಚಾರ ತಿಳಿಯುತ್ತಿದ್ದ ಹಾಗೆ ತಕ್ಷಣವೇ ದೇವೇಗೌಡರ ಮಗ ಡಾ.ರಮೇಶ್ ಪದ್ಮನಾಭನಗರ ನಿವಾಸಕ್ಕೆ ಅಗಮಿಸಿ ತಮ್ಮ ತಂದೆಯ ಯೋಗಕ್ಷೇಮ ವಿಚಾರಿಸಿದ್ದಾರೆ..