ಭಾರತದಲ್ಲಿ ಭಯೋತ್ಪಾದನೆ ಮೂಲಕ ಅನೇಕ ವಿಧ್ವಂಸಕ ಕೃತ್ಯಗಳಿಗೆ ಕಾರಣವಾಗಿದ್ದ ಪಾಕಿಸ್ತಾನದ ಜೈಷ್-ಎ-ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಮತ್ತು ಕುಖ್ಯಾತ ಭಯೋತ್ಪಾದಕ ಮೌಲಾನಾ ಮಸೂದ್ ಅಜರ್ ಮೃತಪಟ್ಟಿದ್ದಾನೆ ಎಂಬ ಸುದ್ದಿ ಹರಿದಾಡುತ್ತಿದೆ.ಇದು ಭಾರತ ಸೇರಿದಂತೆ ಭಯೋತ್ಪಾದನೆ ಪಿಡುಗಿನಿಂದ ನಲುಗುತ್ತಿರುವ ದೇಶಗಳಿಗೆ ಶುಭಸುದ್ದಿಯಾಗಿದೆ. ಮೂತ್ರಪಿಂಡ ತೀವ್ರ ವೈಫಲ್ಯದಿಂದ ಬಳಲುತ್ತಿದ್ದ ಜೈಷ್ ಮುಖ್ಯಸ್ಥ ಮತ್ತು ಪುಲ್ವಾಮಾ ದಾಳಿ ರೂವಾರಿ ಅಜರ್ ಪಾಕಿಸ್ಥಾನದ ರಾವಲ್ಪಿಂಡಿಯ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ.ಆತನನ್ನು ಕೆಲ ದಿನಗಳಿಂದ ಡಯಾಲಿಸಿಸ್‍ಗೆ ಒಳಪಡಿಸಲಾಗಿತ್ತು.
ಮೊನ್ನೆಯಷ್ಟೆ ಪಾಕಿಸ್ಥಾನ ವಿದೇಶಾಂಗ ವ್ಯವಹಾರಗಳ ಸಚಿವ ಷಾ ಮೆಹಮೂದ್ ಖುರೇಷಿ, ಅಜರ್ ಪಾಕಿಸ್ಥಾನದಲ್ಲೇ ಇದ್ದಾನೆ. ಆತನ ಆರೋಗ್ಯ ತೀವ್ರ ಹದಗೆಟ್ಟಿದೆ ಎಂಬುದನ್ನು ಖಚಿತಪಡಿಸಿದ್ದರು. ನೂರಾರು ಜನರ ಸಾವಿಗೆ ಕಾರಣವಾಗಿದ್ದ ಅಜರ್‍ನನ್ನು ನರರೂಪದ ರಾಕ್ಷಸನೆಂದೇ ಬಣ್ಣಿಸಲಾಗಿತ್ತು.ಜೆಇಎಂ ಸಂಘಟನೆ ಮೂಲಕ ಭಾರತದ ಮೇಲೆ ವಿಷಕಾರುತ್ತ ರಕ್ತಪಾತ ನಡೆಸುತ್ತಿದ್ದ ಈತನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಘೋಷಿಸಿ ಜಾಗತಿಕ ಕಪ್ಪುಪಟ್ಟಿಗೆ ಸೇರಿಸಬೇಕೆಂಬ ಪ್ರಸ್ತಾವನೆಯನ್ನು ಭಾರತ, ಅಮೆರಿಕ, ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳು ಮೊನ್ನೆಯಷ್ಟೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಮುಂದೆ ಮಂಡಿಸಿದ್ದವು.
ಮರಣಶಯ್ಯೆಯಲ್ಲಿದ್ದರೂ ಕೂಡ ಭಾರತದ ಮೇಲೆ ದ್ವೇಷದ ಕಿಡಿಕಾರುತ್ತಿದ್ದ ಅಜರ್ ಆಸ್ಪತ್ರೆಯಲ್ಲಿದ್ದುಕೊಂಡೇ ಪುಲ್ವಾಮಾ ಉಗ್ರರ ದಾಳಿ ಮತ್ತು 40ಕ್ಕೂ ಹೆಚ್ಚು ಸಿಆರ್‍ಪಿಎಫ್ ಯೋಧರ ಹತ್ಯಾಕಾಂಡಕ್ಕೆ ಯೋಜನೆ ರೂಪಮಾಡಿದೆ.ಈತನ ವಿರುದ್ಧ ಭಾರತದಾದ್ಯಂತ ವ್ಯಾಪಕ ಆಕ್ರೋಶ ಭುಗಿಲೆದ್ದಿತ್ತು. ಉಗ್ರಗಾಮಿಯ ಮಹಾಗಜನಾದ ಈತನನ್ನು ಖೆಡ್ಡಾಗೆ ಬೀಳಿಸಲು ವಿಶ್ವದ ಅನೇಕ ರಾಷ್ಟ್ರಗಳು ಗಂಭೀರ ಯತ್ನ ನಡೆಸುತ್ತಿರುವಾಗಲೇ ಅಜರ್ ಮೃತಪಟ್ಟಿದ್ದಾನೆಂಬ ಸುದ್ದಿ ಲಕ್ಷಾಂತರ ಜನರಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಆದರೆ ಈ ಸುದ್ದಿಯನ್ನು ಪಾಕಿಸ್ತಾನ ಇನ್ನೂ ಅಧಿಕೃತ ಪಡಿಸಿಲ್ಲ