ಲೋಕಸಭಾ ಚುನಾವಣೆಯ ಕಾವು ಮಂಡ್ಯದಲ್ಲಿ ಈಗಾಗಲೇ ಹೆಚ್ಚಿದೆ. ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ ಸ್ವಾಮಿ ಅವರು ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯೋದು ಪಕ್ಕಾ ಆಗಿದೆ.
ಮೈತ್ರಿ ಲೆಕ್ಕಾಚಾರದಿಂದಾಗಿ ಸುಮಲತಾ ಅಂಬರೀಶ್ ಅವರಿಗೆ ಕಾಂಗ್ರೆಸ್ ‘ಕೈ’ಕೊಟ್ಟಿದೆ. ಕಾಂಗ್ರೆಸ್ ಟಿಕೆಟ್ ನೀಡದೇ ಇದ್ದರೂ ಸುಮಲತಾ ಸ್ಪರ್ಧೆಯಿಂದ ಹಿಂದೆ ಸರಿದಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿಯಾದರೂ ಕಣಕ್ಕಿಳಿಯೋದು ಪಕ್ಕಾ ಆಗಿದೆ.
ಆದರೆ, ಈಗಲೇ ನಿಖಿಲ್ ಸ್ಪರ್ಧೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ‘ಗೋ ಬ್ಯಾಕ್ ನಿಖಿಲ್ – ವಿ ಸಪೋರ್ಟ್ ಸುಮಲತಾ’ ಪೋಸ್ಟ್ ಗಳು ತುಂಬಾ ವೈರಲ್ ಆಗುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಇದೊಂದು ಅಭಿಯಾನವಾಗಿ ಮಾರ್ಪಟ್ಟಿದೆ. ಈ ಬಗ್ಗೆ ಮಾತಾಡಿರೋ ಸಿಎಂ ಕುಮಾರಸ್ವಾಮಿ, ‘ಸೋಶಿಯಲ್ ಮೀಡಿಯಾದಲ್ಲಿನ ಕಥೆ ಬಿಡಿ… ವಿರೋಧ ಮಾಡೋ ವಿಂಗೇ ಇದೆ. ಬೆಂಬಲಿಸೋರು ಇದ್ದಾರೆ. ಬೇಡ ಅನ್ನೋರು ಇದ್ದಾರೆ’ ಎಂದಿದ್ದಾರೆ.
ಅದಿರಲಿ ಅಷ್ಟಕ್ಕೂ ನಿಖಿಲ್ ಗೆ ವಿರೋಧ ಏಕೆ ಅಂದ್ರೆ?
ಮುಖ್ಯವಾಗಿ ‘ಜೆಡಿಎಸ್ ಎಂದರೆ -ಜಸ್ಟ್ ಫಾರ್ ದೇವೇಗೌಡ & ಸನ್ಸ್ ಅಂತ ಆಗಿದೆ. ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗಿದೆ. ಹಾಸನ, ರಾಮನಗರ, ಚನ್ನಪಟ್ಟಣ, ಮಂಡ್ಯ ಎಲ್ಲಾ ದೇವೇಗೌಡರ ಫ್ಯಾಮಿಲಿಗೇ ಆದರೆ ಬೇರೆಯವರು ಏನ್ ಮಾಡೋದು’ ಅನ್ನೋದು ಜನಾಕ್ರೋಶಕ್ಕೆ ಕಾರಣವಾಗಿದೆ.
ಇವುಗಳ ಜೊತೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಮೈತ್ರಿಯ ಕೆಲ ನಾಯಕರು ಸುಮಲತಾ ವಿರುದ್ಧ ಮಾತನಾಡುತ್ತಿರುವುದು ನಿಖಿಲ್ ಗೆ ಮುಳುವಾಗಿದೆ.
ಒಂದು ಕಡೆಯಿಂದ ನೇರವಾಗಿ ನಿಖಿಲ್ ಗೆ ವಿರೋಧ ವ್ಯಕ್ತವಾಗುತ್ತಿದ್ದರೆ, ಇನ್ನೊಂದು ಕಡೆಯಿಂದ ಕಾಂಗ್ರೆಸ್ ನಾಯಕರು ನೇರವಾಗಿ, ಪರೋಕ್ಷವಾಗಿ ಸುಮಲತಾ ಪರ ಬ್ಯಾಟ್ ಬೀಸುವ ಮೂಲಕ ನಿಖಿಲ್ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಸುಮಲತಾ ಅವರಿಗೆ ಸಪೋರ್ಟ್ ಮಾಡುತ್ತಿದ್ದು, ಸಿಎಂಗೆ ಹೊಡೆತ ನೀಡಲು ಪ್ಲಾನ್ ಮಾಡಿದ್ದಾರೆ ಎಂಬ ಮಾತುಗಳೂ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಅಷ್ಟಕ್ಕೂ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ವಿರೋಧ ಏಕೆ.? ಇಲ್ಲಿದೆ ಅಸಲಿ ಸತ್ಯ.!
Date: